×
Ad

ಇರಾಕ್‌ನ ಇಮಾಮ್ ಅಲಿ ವಾಯುನೆಲೆಯ ಮೇಲೆ ದಾಳಿ: ವರದಿ

Update: 2025-06-24 07:43 IST

PC: X.com/Ph.Gritti

ಬಾಗ್ದಾದ್: ಇರಾಕ್‌ ನ ಇಮಾಮ್ ಅಲಿ ನೆಲೆಯ ರಾಡಾರ್ ವ್ಯವಸ್ಥೆಗಳ ಮೇಲೆ ದಾಳಿ ನಡೆದಿರುವುದಾಗಿ ಅಲ್ ಸುಮಾರಿಯಾ ಟಿವಿ ನೆಟ್‌ವರ್ಕ್ ಉಲ್ಲೇಖಿಸಿ Aljazeera ವರದಿ ಮಾಡಿದೆ.

ಬಾಗ್ದಾದ್ ಮೂಲದ ದೂರದರ್ಶನವು ದಾಳಿಯನ್ನು ಯಾರು ನಡೆಸಿದ್ದಾರೆಂದು ಹೇಳಿಲ್ಲ.ಇಮಾಮ್ ಅಲಿ ವಾಯುನೆಲೆಯನ್ನು 2003ರಿಂದ 2011ರವರೆಗೆ ಅಮೆರಿಕವು ಇರಾಕ್ ಮೇಲೆ ಯುದ್ಧ ಸಾರಿದ ಸಮಯದಲ್ಲಿ ತನ್ನ ವಾಯು ನೆಲೆಯಾಗಿ ಬಳಸುತ್ತಿತ್ತು.

ಇಮಾಮ್ ಅಲಿ ನೆಲೆಯು ಪ್ರಾಂತೀಯ ರಾಜಧಾನಿ ನಾಸಿರಿಯಾದ ನೈಋತ್ಯಕ್ಕೆ, ಇರಾಕ್‌ನ ಝೀಖಾರ್ ‌ಗವರ್ನರೇಟ್‌  ಪ್ರಾಂತ್ಯದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News