ಇರಾಕ್ ಚುನಾವಣಾ ಫಲಿತಾಂಶಕ್ಕೆ ಸುಪ್ರೀಂ ಫೆಡರಲ್ ಕೋರ್ಟ್ ಅನುಮೋದನೆ
Update: 2025-12-15 23:50 IST
photo credit: Reuters
ಬಗ್ದಾದ್, ಡಿ.15: ಇರಾಕಿನಲ್ಲಿ ಕಳೆದ ತಿಂಗಳು ನಡೆದ ಸಂಸದೀಯ ಚುನಾವಣೆಯ ಫಲಿತಾಂಶವನ್ನು ಸುಪ್ರೀಂ ಫೆಡರಲ್ ನ್ಯಾಯಾಲಯ ಅನುಮೋದಿಸಿದ್ದು ಉಸ್ತುವಾರಿ ಪ್ರಧಾನಿ ಮುಹಮ್ಮದ್ ಶಿಯಾ ಅಲ್-ಸುಡಾನಿ ಅವರ ಪಕ್ಷವು ಅತೀ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಅವರಿಗೆ ಮತ್ತೊಂದು ಅವಧಿಯನ್ನು ಖಚಿತಪಡಿಸಲು ಇದು ಸಾಕಾಗದು ಎಂದು ದೃಢಪಡಿಸಿದೆ.
ಮತದಾನ ಪ್ರಕ್ರಿಯೆಯು ಸಾಂವಿಧಾನಿಕ ಮತ್ತು ಕಾನೂನಿನ ಅವಶ್ಯಕತೆಗಳನ್ನು ಪೂರೈಸಿದೆ ಮತ್ತು ಮತದಾನದ ಸಿಂಧುತ್ವದ ಮೇಲೆ ಪರಿಣಾಮ ಬೀರುವಂತಹ ಯಾವುದೇ ಅಕ್ರಮಗಳನ್ನು ಹೊಂದಿಲ್ಲ ಎಂದು ನ್ಯಾಯಾಲಯ ದೃಢಪಡಿಸಿದೆ.
329 ಸ್ಥಾನಗಳಿರುವ ಸಂಸತ್ತಿನಲ್ಲಿ ಅಲ್-ಸುಡಾನಿ ಅವರ `ರಿಕನ್‍ಸ್ಟ್ರಕ್ಷನ್ ಆ್ಯಂಡ್ ಡೆವಲಪ್‍ಮೆಂಟ್' ಒಕ್ಕೂಟ 46 ಸ್ಥಾನಗಳನ್ನು ಪಡೆದು ಅತೀ ದೊಡ್ಡ ಪಕ್ಷವಾಗಿ ಗುರುತಿಸಿಕೊಂಡಿದೆ. ಆದರೆ ಯಾವುದೇ ಒಕ್ಕೂಟವು ಸ್ವತಃ ಸರಕಾರ ರಚಿಸುವಷ್ಟು ಸ್ಥಾನಗಳನ್ನು ಗಳಿಸಲು ವಿಫಲವಾಗಿದೆ.