×
Ad

ಡ್ರೋನ್ ದಾಳಿಯಲ್ಲಿ IRGCಯ ಎರಡನೇ ಕಮಾಂಡರ್ ಹತ್ಯೆ: ಇಸ್ರೇಲ್ ಹೇಳಿಕೆ

Update: 2025-06-21 10:33 IST
ಇರಾನ್‌ ಮೇಲೆ ಇಸ್ರೇಲ್‌ ದಾಳಿ (File Photo: PTI)

ಟೆಲ್ ಅವೀವ್: ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಎರಡನೇ ಕಮಾಂಡರ್‌ ಅಮೀನ್ ಪೌರ್ ಜೋಡ್ಖಿರನ್ನು ಮಾನವರಹಿತ ವೈಮಾನಿಕ ವಾಹನ (UAV) ಘಟಕದ ಡ್ರೋನ್ ಬಳಸಿ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಈ ಕುರಿತು ಇಸ್ರೇಲ್ ಸೇನೆಯು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ, ಇಸ್ರೇಲ್ ಮೇಲೆ ಡ್ರೋನ್ ದಾಳಿ ಮಾಡಿದ IRGCಯ ಎರಡನೇ ಕಮಾಂಡರ್ ಅಮೀನ್ ಪೌರ್ ಜೋಡ್ಖಿ ಅವರನ್ನು ವಾಯುಪಡೆಯ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ. ಅವರು ಇರಾನ್‌ನ ನೈರುತ್ಯದಿಂದ ಇಸ್ರೇಲ್ ಮೇಲೆ ನೂರಾರು UAV ಡ್ರೋನ್‌ಗಳನ್ನು ಉಡಾಯಿಸಿದ್ದರು ಎಂದು ಇಸ್ರೇಲ್ ಆರೋಪಿಸಿದೆ.

ಜೂನ್ 13ರಂದು IRGCಯ ಡ್ರೋನ್ ಪಡೆಯ ಮತ್ತೊಬ್ಬ ಕಮಾಂಡರ್ ತಹರ್ ಫರ್ ಅವರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್‌ ಸೇನೆ ಹೇಳಿಕೊಂಡಿತ್ತು. ಆ ಬಳಿಕ ಜೋಡ್ಖಿ ಇರಾನಿನ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿಕೊಂಡಿದ್ದರು ಎಂದು ಇಸ್ರೇಲ್ ಸೇನೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News