×
Ad

ಇಸ್ರೇಲ್ | ದಾಳಿಯಲ್ಲಿ ಒಬ್ಬ ಸಾವು, 29 ಮಂದಿಗೆ ಗಾಯ

Update: 2024-10-28 21:30 IST
 screengrab photo: aljazeera.com

ಟೆಲ್‍ಅವೀವ್ : ಟೆಲ್‍ಅವೀವ್ ಬಳಿ ರವಿವಾರ ನಡೆದ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಇತರ 29 ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ಟೆಲ್‍ಅವೀವ್ ಬಳಿ ಜನರಿಂದ ತುಂಬಿದ್ದ ಬಸ್ಸು ನಿಲ್ದಾಣಕ್ಕೆ ಟ್ರಕ್ ನುಗ್ಗಿದ್ದರಿಂದ ಒಬ್ಬ ಪ್ರಯಾಣಿಕ ಸಾವನ್ನಪ್ಪಿದ್ದು 29 ಮಂದಿ ಗಾಯಗೊಂಡಿದ್ದಾರೆ. ಬಳಿಕ ಚಾಲಕ ತನ್ನ ವಾಹನವನ್ನು ಅಲ್ಲಿ ನಿಂತಿದ್ದ ಬಸ್ಸಿಗೂ ಡಿಕ್ಕಿ ಹೊಡೆಸಲು ಪ್ರಯತ್ನಿಸಿದ್ದಾನೆ. ತಕ್ಷಣ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ. ಚಾಲಕನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಮತ್ತೊಂದು ಘಟನೆಯಲ್ಲಿ ಜೆರುಸಲೇಂ ಬಳಿ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿಯ ಮೇಲೆ ಚೂರಿಯಿಂದ ದಾಳಿ ನಡೆಸಲು ಪ್ರಯತ್ನಿಸಿದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಟೆಲ್ ಅವೀವ್‍ನಲ್ಲಿ ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸಾದ್‍ನ ಪ್ರಧಾನ ಕಚೇರಿ ಬಳಿ ಬಸ್ಸು ನಿಲ್ದಾಣಕ್ಕೆ ಟ್ರಕ್ ಅಪ್ಪಳಿಸಿದ ಘಟನೆ ಫೆಲೆಸ್ತೀನೀಯರ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಅಪರಾಧಕ್ಕೆ ಪ್ರತೀಕಾರ ಕೃತ್ಯವಾಗಿದೆ ಎಂದು ಹಮಾಸ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News