×
Ad

ಯುರೋಪಿಯನ್ ಯೂನಿಯನ್‌ ನ ಇಬ್ಬರು ಸಂಸದರಿಗೆ ಪ್ರವೇಶ ನಿರಾಕರಿಸಿದ ಇಸ್ರೇಲ್

Update: 2025-02-25 21:45 IST

Photo Credit | Zakaria Abdelkafi/ AFP

ಟೆಲ್‍ಅವೀವ್: ಇಸ್ರೇಲ್ ಅನ್ನು ಬಹಿಷ್ಕರಿಸಬೇಕೆಂಬ ವಾದವನ್ನು ನಿರಂತರ ಉತ್ತೇಜಿಸುತ್ತಿದ್ದ ಯುರೋಪಿಯನ್ ಯೂನಿಯನ್‌ ನ ಇಬ್ಬರು ಸಂಸದರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಇಸ್ರೇಲ್ ಸರಕಾರ ಹೇಳಿದೆ.

ಯುರೋಪಿಯನ್ ಪಾರ್ಲಿಮೆಂಟ್‍ನ ಯುರೋಪಿಯನ್ ಯೂನಿಯನ್-ಫೆಲೆಸ್ತೀನ್ ನಿಯೋಗದ ಅಧ್ಯಕ್ಷೆ ಲಿನ್ ಬೊಯ್ಲಾನ್ ಹಾಗೂ ಸಂಸದೆ ರೀಮಾ ಹಸನ್‍ಗೆ ಬೆನ್-ಗ್ಯುರಿಯಾನ್ ವಿಮಾನನಿಲ್ದಾಣಕ್ಕೆ ಪ್ರವೇಶ ನಿರಾಕರಿಸಲಾಗಿದ್ದು ಯುರೋಪ್ ಗೆ ಹಿಂತಿರುಗುವಂತೆ ಆದೇಶಿಸಲಾಗಿದೆ. ರೀಮಾ ಹಸನ್ `ಇಸ್ರೇಲ್ ವಿರುದ್ಧದ ಬಹಿಷ್ಕಾರಗಳನ್ನು ಉತ್ತೇಜಿಸಲು ನಿರಂತರ ಕಾರ್ಯ ನಿರ್ವಹಿಸುತ್ತಿದ್ದರು. ಜತೆಗೆ ಸಾಮಾಜಿಕ ಮಾಧ್ಯಮ ಮತ್ತು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಇಸ್ರೇಲ್ ವಿರುದ್ದ ಹಲವಾರು ಸಾರ್ವಜನಿಕ ಹೇಳಿಕೆ ನೀಡಿದ್ದಾರೆ ಎಂದು ಆಂತರಿಕ ಸಚಿವ ಮೊಷೆ ಅರ್ಬೆಲ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News