ಇರಾನ್ ಮೇಲೆ ಅಮೆರಿಕದಿಂದ ದಾಳಿ | ಇಸ್ರೇಲ್‍ನಲ್ಲಿ `ರೆಡ್ ಅಲರ್ಟ್'
Update: 2025-06-22 21:10 IST
PC ; PTI
ಜೆರುಸಲೇಂ: ಇರಾನಿನ ಮೇಲೆ ಅಮೆರಿಕದ ದಾಳಿಯ ಬೆನ್ನಲ್ಲೇ ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ದೇಶದಾದ್ಯಂತ `ಕಟ್ಟೆಚ್ಚರದ ಸ್ಥಿತಿ'ಯನ್ನು ಘೋಷಿಸಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಇಸ್ರೇಲ್ ತನ್ನ ವಾಯುಕ್ಷೇತ್ರವನ್ನು ಮುಚ್ಚಿದೆ. ಇಸ್ರೇಲ್ ಸೇನೆಯೂ ದೇಶದ `ಎಚ್ಚರಿಕೆ ಹಂತವನ್ನು' ಹೆಚ್ಚಿಸಿದ್ದು ದೇಶದ ಎಲ್ಲಾ ಪ್ರದೇಶಗಳೂ ಈಗ ಅತ್ಯಗತ್ಯದ ಚಲನವಲನಕ್ಕೆ ಮಾತ್ರ ಸೀಮಿತಗೊಂಡಿದೆ. ಶಾಲೆ ಹಾಗೂ ಕಚೇರಿಗಳನ್ನು ಮುಚ್ಚಲಾಗಿದ್ದು ಅತ್ಯಗತ್ಯದ ಕ್ಷೇತ್ರಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ ಎಂದು ವರದಿಯಾಗಿದೆ.