×
Ad

ಇಸ್ರೇಲ್, ಈಜಿಪ್ಟ್ ಹೊರತುಪಡಿಸಿ ಎಲ್ಲಾ ವಿದೇಶಿ ಸಹಾಯ ಸ್ಥಗಿತಗೊಳಿಸಿದ ಟ್ರಂಪ್

Update: 2025-01-25 21:08 IST

ಟ್ರಂಪ್ | PTI 

ವಾಷಿಂಗ್ಟನ್ : ಇಸ್ರೇಲ್ ಮತ್ತು ಈಜಿಪ್ಟ್ ಹೊರತುಪಡಿಸಿ ಉಳಿದ ಎಲ್ಲಾ ವಿದೇಶಿ ಸಹಾಯವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮೆರಿಕ ಸರಕಾರ ಸ್ಥಗಿತಗೊಳಿಸಿದೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೊ ವಿದೇಶಾಂಗ ಇಲಾಖೆಗೆ ರವಾನಿಸಿದ ಆಂತರಿಕ ಮೆಮೋದಲ್ಲಿ ಈ ಸೂಚನೆ ನೀಡಿದ್ದಾರೆ.

ಪ್ರಸ್ತಾವಿತ ಹೊಸ ನೆರವಿನ ಪ್ಯಾಕೇಜ್ ಅಥವಾ ಹಾಲಿ ನೆರವಿನ ಪ್ಯಾಕೇಜಿನ ವಿಸ್ತರಣೆಯನ್ನು ವಿದೇಶಾಂಗ ಕಾರ್ಯದರ್ಶಿ ಪರಿಶೀಲಿಸಿ ಅನುಮೋದಿಸುವ ತನಕ ಯಾವುದೇ ಹೊಸ ಸಹಾಯ ಅಥವಾ ಅಸ್ತಿತ್ವದಲ್ಲಿರುವ ನೆರವು ಯೋಜನೆಗಳ ವಿಸ್ತರಣೆಯನ್ನು ತಕ್ಷಣದಿಂದ ತಡೆಹಿಡಿಯಬೇಕು (ಇಸ್ರೇಲ್ ಮತ್ತು ಈಜಿಪ್ಟ್ ಹೊರತುಪಡಿಸಿ) ಎಂದು ಮೆಮೋದಲ್ಲಿ ಉಲ್ಲೇಖಿಸಲಾಗಿದೆ. ಟ್ರಂಪ್ ಸರಕಾರದ ಈ ಕ್ರಮವು ಉಕ್ರೇನ್‍ಗೆ ಅಮೆರಿಕ ನೀಡುತ್ತಿರುವ ಮಿಲಿಟರಿ ನೆರವಿನ ಮೇಲೆ ಪರಿಣಾಮ ಬೀರಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News