×
Ad

ಬೈರುತ್ ಆಸ್ಪತ್ರೆಯ ಬಳಿ ಇಸ್ರೇಲ್ ದಾಳಿ | 13 ಮಂದಿ ಮೃತ್ಯು

Update: 2024-10-22 21:06 IST

PC : X 

ಬೈರುತ್ : ಲೆಬನಾನ್ ರಾಜಧಾನಿ ಬೈರುತ್‍ನ ದಕ್ಷಿಣದಲ್ಲಿರುವ ಆಸ್ಪತ್ರೆಯ ಬಳಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮಗುವಿನ ಸಹಿತ 13 ಮಂದಿ ಮೃತಪಟ್ಟಿರುವುದಾಗಿ ಲೆಬನಾನ್‍ನ ಆರೋಗ್ಯ ಇಲಾಖೆ ಮಂಗಳವಾರ ಹೇಳಿದೆ.

ನಗರ ಕೇಂದ್ರದಿಂದ ಕೆಲವು ಕಿ.ಮೀ ದೂರದಲ್ಲಿರುವ ಲೆಬನಾನ್‍ನ ಅತೀ ದೊಡ್ಡ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ರಫಿಕ್ ಹರಿರಿ ಆಸ್ಪತ್ರೆಯ ಬಳಿ ನಡೆದ ದಾಳಿಯಲ್ಲಿ 13 ಮಂದಿ ಮೃತಪಟ್ಟಿರುವ ಜತೆಗೆ ಇತರ 57 ಮಂದಿ ಗಾಯಗೊಂಡಿದ್ದಾರೆ. ದಾಳಿಯಲ್ಲಿ ಆಸ್ಪತ್ರೆಯ ಕಟ್ಟಡಕ್ಕೆ ಸ್ವಲ್ಪ ಹಾನಿಯಾಗಿದ್ದು ಸಮೀಪದ ನಾಲ್ಕು ಕಟ್ಟಡಗಳು ಧ್ವಂಸಗೊಂಡಿವೆ. ಉರುಳಿ ಬಿದ್ದಿರುವ ಕಟ್ಟಡಗಳ ಅವಶೇಷಗಳಡಿ ಬದುಕುಳಿದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News