ಬೆಂಜಮಿನ್ ನೆತನ್ಯಾಹು | Photo Credit : AP 

ಟೆಲ್ ಅವೀವ್: ಇಸ್ರೇಲ್ ನ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಮುಂದುವರಿದಿದ್ದು, ಶೇ 85.6ರಷ್ಟು ಮತಗಳ ಎಣಿಕೆ ಪೂರ್ಣಗೊಂಡಿದೆ. ನೆತನ್ಯಾಹು ಬಣವು 53 ಸ್ಥಾನಗಳನ್ನು ಪಡೆದಿದೆ. ಕೇಂದ್ರ ಚುನಾವಣಾ ಸಮಿತಿ ಬಿಡುಗಡೆ ಮಾಡಿರುವ ಹೊಸ ಮಾಹಿತಿಯ ಪ್ರಕಾರ, ಐಸೆನ್‌ ಕೋಟ್ ಬಣವು 48 ಸ್ಥಾನಗಳನ್ನು ಹೊಂದಿದ್ದರೆ, ಅರಬ್ ಪಕ್ಷಗಳು 19 ಸ್ಥಾನಗಳನ್ನು ಪಡೆದಿವೆ ಎಂದು Aljazeera.com ವರದಿ ಮಾಡಿದೆ.

ಇಸ್ರೇಲ್ ನ 120 ಸದಸ್ಯ ಬಲದ ಸಂಸತ್ ನಲ್ಲಿ (ನೆಸೆಟ್) ಸರಕಾರ ರಚಿಸಲು ಕನಿಷ್ಠ 61 ಸ್ಥಾನಗಳ ಅಗತ್ಯವಿದೆ. ಸದ್ಯದ ಅಂಕಿಅಂಶಗಳ ಪ್ರಕಾರ, ಯಾವುದೇ ಬಣಕ್ಕೆ ಬಹುಮತ ದೊರೆತಿಲ್ಲ. ಹೀಗಾಗಿ, ಮುಂದಿನ ಸರಕಾರ ರಚನೆಗೆ ಇತರ ಪಕ್ಷಗಳ ಬೆಂಬಲ ನಿರ್ಣಾಯಕವಾಗುವ ಸಾಧ್ಯತೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor