×
Ad

ಇರಾನ್ ಮೇಲೆ ದಾಳಿ ಮುಂದುವರಿಸಿದ ಇಸ್ರೇಲ್

Update: 2025-06-16 22:08 IST

PC : PTI 

ಜೆರುಸಲೇಂ: ಇರಾನ್ ಮೇಲಿನ ವೈಮಾನಿಕ ದಾಳಿಯನ್ನು ಸೋಮವಾರ ಮುಂದುವರಿಸಿದ್ದು ಇರಾನ್ ನ ಕ್ಷಿಪಣಿ ಲಾಂಚರ್ ವ್ಯವಸ್ಥೆಯ ಮೂರನೇ ಒಂದರಷ್ಟನ್ನು ನಿಷ್ಕ್ರಿಯಗೊಳಿಸಿರುವುದಾಗಿ ಇಸ್ರೇಲ್ ಹೇಳಿದೆ.

ಇಸ್ರೇಲ್ ನ ವಾಯುಪಡೆ ಈಗ ಇರಾನ್ ನ ವಾಯು ಪ್ರದೇಶವನ್ನು ನಿಯಂತ್ರಿಸುತ್ತಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿಪಾದಿಸಿದ್ದಾರೆ. ಇರಾನಿನ ವಾಯು ರಕ್ಷಣೆ ಮತ್ತು ಕ್ಷಿಪಣಿ ವ್ಯವಸ್ಥೆಗಳ ಸಾಮಥ್ರ್ಯಗಳಿಗೆ ಭಾರೀ ಹೊಡೆತ ಬಿದ್ದಿದ್ದು ಈಗ ತನ್ನ ವಿಮಾನಗಳು ಟೆಹ್ರಾನ್ ನ ಮೇಲೆ ಯಾವುದೇ ಪ್ರಮುಖ ಬೆದರಿಕೆ ಎದುರಿಸದೆ ಕಾರ್ಯ ನಿರ್ವಹಿಸಬಹುದಾಗಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.

ಈ ಮಧ್ಯೆ, ಇರಾನ್ ನ ಪಶ್ಚಿಮದ ನಗರ ಕೆರ್ಮನ್ ಶಾದಲ್ಲಿನ ಆಸ್ಪತ್ರೆಯ ಮೇಲೆ ಇಸ್ರೇಲ್ ದಾಳಿ ನಡೆಸಿರುವುದು `ಯುದ್ಧಾಪರಾಧವಾಗಿದೆ' ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರರು ಖಂಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News