×
Ad

ಗಾಝಾ ನಗರದ 40% ಇಸ್ರೇಲ್ ನ ನಿಯಂತ್ರಣಕ್ಕೆ: ವರದಿ

Update: 2025-09-05 21:29 IST

PC : X.com

ಜೆರುಸಲೇಂ, ಸೆ.5: ಗಾಝಾ ನಗರದ 40% ಇಸ್ರೇಲ್ ನಿಯಂತ್ರಣಕ್ಕೆ ಬಂದಿದೆ ಎಂದು ಇಸ್ರೇಲ್ ಮಿಲಿಟರಿಯ ವಕ್ತಾರರು ಹೇಳಿದ್ದಾರೆ.

ನಾವು ಹಮಾಸ್‍ ನ ನೆಲೆಗಳಿಗೆ ಹಾನಿ ಮಾಡುವುದನ್ನು ಮುಂದುವರಿಸಿದ್ದು ಝೈಟಾನ್ ಮತ್ತು ಶೇಖ್ ರದ್ವಾನ್ ಪ್ರದೇಶ ಸೇರಿದಂತೆ ಈಗ ಗಾಝಾ ನಗರದ 40% ಪ್ರದೇಶ ನಮ್ಮ ನಿಯಂತ್ರಣದಲ್ಲಿದೆ. ಮುಂಬರುವ ದಿನಗಳಲ್ಲಿ ಕಾರ್ಯಾಚರಣೆಯನ್ನು ವಿಸ್ತರಿಸಿ ತೀವ್ರಗೊಳಿಸಲಾಗುವುದು ಇಸ್ರೇಲ್ ಮಿಲಿಟರಿ ವಕ್ತಾರ ಬ್ರಿ|ಜ| ಎಫೀ ಡೆಫ್ರಿನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ನಾವು ಎಲ್ಲೆಡೆ ಹಮಾಸ್ ಅನ್ನು ಬೆನ್ನಟ್ಟಲಿದ್ದೇವೆ. ಉಳಿದಿರುವ ಒತ್ತೆಯಾಳುಗಳು ವಾಪಸಾದಾಗ ಮತ್ತು ಹಮಾಸ್‍ನ ಆಳ್ವಿಕೆ ಅಂತ್ಯಗೊಂಡರೆ ಮಾತ್ರ ಈ ಕಾರ್ಯಾಚರಣೆ ಕೊನೆಗೊಳ್ಳಲಿದೆ. ಯುದ್ಧ ಕೊನೆಗೊಂಡ ಬಳಿಕದ ಯೋಜನೆ ಸಿದ್ಧಗೊಳ್ಳದಿದ್ದರೆ ಗಾಝಾದಲ್ಲಿ ಮಿಲಿಟರಿ ಆಡಳಿತ ಜಾರಿಗೊಳಿಸಬೇಕಾಗುತ್ತದೆ ಎಂದು ಸೇನಾ ಮುಖ್ಯಸ್ಥ ಇಯಾಲ್ ಝಾಮಿರ್ ಕ್ಯಾಬಿನೆಟ್ ಮಂತ್ರಿಗಳಿಗೆ ದೃಢಪಡಿಸಿರುವುದಾಗಿ ಡೆಫ್ರಿನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News