ಯುದ್ಧ ತೀವ್ರಗೊಂಡರೆ ಇಸ್ರೇಲ್ ತನ್ನಅಸ್ತಿತ್ವ ಕಳೆದುಕೊಳ್ಳಬಹುದು: ರಶ್ಯ ಎಚ್ಚರಿಕೆ
ಆಪ್ಟಿ ಅಲೌದಿನೋವ್ | Photo Credit : ani
ಮಾಸ್ಕೊ, ಆ. 20: ಪಶ್ಚಿಮ ಏಷ್ಯಾದಲ್ಲಿ ಪ್ರಸ್ತುತ ನಡೆಯುತ್ತಿರುವ ಸಂಘರ್ಷವು ಅಂತಿಮವಾಗಿ ಇಸ್ರೇಲ್ ಒಂದು ರಾಷ್ಟ್ರವಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಪರಿಸ್ಥಿತಿಗೆ ತಲುಪಬಹುದು ಎಂದು ರಶ್ಯದ ಸಶಸ್ತ್ರ ಪಡೆಗಳ ಮುಖ್ಯ ಮಿಲಿಟರಿ-ರಾಜಕೀಯ ವಿಭಾಗದ ಉಪ ಮುಖ್ಯಸ್ಥ ಲೆ|ಜ| ಆಪ್ಟಿ ಅಲೌದಿನೋವ್ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಮಧ್ಯಪ್ರಾಚ್ಯದಲ್ಲಿನ ಸಂಘರ್ಷವು ಮುಂಬರುವ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಸಂಘರ್ಷವನ್ನು ಸಾಧ್ಯವಾದಷ್ಟು ವಿಸ್ತರಿಸುವುದು ಮತ್ತು ಅಮೆರಿಕ ಹಾಗೂ ನ್ಯಾಟೋ ಎರಡನ್ನೂ ಈ ಸಂಘರ್ಷದಲ್ಲಿ ಭಾಗಿಯಾಗುವಂತೆ ಮಾಡುವುದು ಇಸ್ರೇಲ್ ನ ಉದ್ದೇಶವಾಗಿದೆ ಎಂದು ನಾನು ನಂಬುತ್ತೇನೆ. ಅವರು ಇದರಲ್ಲಿ ನಿಪುಣರು. ಆದರೆ ಅಂತಿಮವಾಗಿ, ಅವರು ತಮ್ಮ ಸಾಮರ್ಥ್ಯವನ್ನು ಅತಿಯಾಗಿ ಅಂದಾಜಿಸಿಕೊಂಡು, ಒಂದು ರಾಷ್ಟ್ರವಾಗಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳಲಿದ್ದಾರೆ ಎಂದು ಅಲೌದಿನೋವ್ ಹೇಳಿದರು.