ಚೀನಾ, ಟರ್ಕಿಯಿಂದ ಪಾಕಿಸ್ತಾನಕ್ಕೆ ಮಿಲಿಟರಿ ವಿಮಾನಗಳ ಸಂಚಾರದಲ್ಲಿ ಭಾರಿ ಏರಿಕೆ: ವರದಿ
ಸಾಂದರ್ಭಿಕ ಚಿತ್ರ
ಇಸ್ಲಮಾಬಾದ್, ಆ.20: ಚೀನಾ ಮತ್ತು ಟರ್ಕಿಯಿಂದ ಪಾಕಿಸ್ತಾನಕ್ಕೆ ಮಿಲಿಟರಿ ವಿಮಾನಗಳ ಸಂಚಾರದಲ್ಲಿ ಇದ್ದಕ್ಕಿದ್ದಂತೆ ಭಾರಿ ಏರಿಕೆ ಕಂಡುಬಂದಿರುವುದು ಇಸ್ಲಾಮಾಬಾದ್ ಗೆ ರಕ್ಷಣಾ ಉಪಕರಣಗಳ ವರ್ಗಾವಣೆಯಾಗಿರುವ ಸಾಧ್ಯತೆಯ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸುಮಾರು 60 ಗಂಟೆಗಳ ಅವಧಿಯಲ್ಲಿ ಭಾರಿ ಮಿಲಿಟರಿ ಸರಕು ಸಾಗಣೆ ವಿಮಾನಗಳು ಪಾಕಿಸ್ತಾನದ ವಾಯುನೆಲೆಗಳಿಗೆ ಸತತವಾಗಿ ಪ್ರಯಾಣ ಬೆಳೆಸಿವೆ ಎಂದು ಭದ್ರತಾ ಮೂಲಗಳು ಪ್ರತಿಪಾದಿಸಿವೆ.
ಚೀನಾದ ಮಿಲಿಟರಿ ವಿಮಾನಗಳು ರಾವಲ್ಪಿಂಡಿ ಬಳಿಯ ಪಾಕಿಸ್ತಾನದ ನೂರ್ಖಾ್ನ್ ವಾಯುನೆಲೆ ಹಾಗೂ ಕರಾಚಿಯ ಮಸ್ರೂರ್ ವಾಯುನೆಲೆಯಲ್ಲಿ ಇಳಿಯುತ್ತಿರುವುದು ಕಂಡುಬಂದಿದೆ. ಈ ಹೆಚ್ಚಿದ ಚಟುವಟಿಕೆಯಲ್ಲಿ ಟರ್ಕಿಯ ಮಿಲಿಟರಿ ಸರಕು ಸಾಗಣೆ ವಿಮಾನಗಳು ಸಹ ಭಾಗಿಯಾಗಿದ್ದವು . ಡ್ರೋನ್ ಗಳು ಮತ್ತು ಇತರ ರಕ್ಷಣಾ ಸಂಬಂಧಿತ ಸಾಮಗ್ರಿಗಳು ಸೇರಿದಂತೆ ಮಿಲಿಟರಿ ಉಪಕರಣಗಳ ಸಾಗಣೆಗೆ ಈ ವಿಮಾನಗಳ ಸಂಚಾರ ಸಂಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.
ಮತ್ತೊಂದೆಡೆ, ಟರ್ಕಿಯು ಪಾಕಿಸ್ತಾನಕ್ಕೆ ವಿಶೇಷವಾಗಿ ಡ್ರೋನ್ಗಣಳು, ನೌಕಾ ವ್ಯವಸ್ಥೆಗಳು ಮತ್ತು ಏರೋಸ್ಪೇಸ್ ತಂತ್ರಜ್ಞಾನದಲ್ಲಿ ಪ್ರಮುಖ ರಕ್ಷಣಾ ಪಾಲುದಾರನಾಗಿ ಹೊರಹೊಮ್ಮಿದೆ. ಭಾರತದ ಪಾಲಿಗೆ ಈ ಬೆಳವಣಿಗೆಯು ಗಮನಾರ್ಹವಾಗಬಹುದು ಎಂದು ಮೂಲಗಳು ತಿಳಿಸಿವೆ.