ಮೊದಲ ಬಾರಿಗೆ 40 ಟ್ರಿಲಿಯನ್ ಡಾಲರ್ ಗಡಿದಾಟಿದ ಅಮೆರಿಕದ ರಾಷ್ಟ್ರೀಯ ಸಾಲ

Update: 2026-08-20 21:50 IST

ಡೊನಾಲ್ಡ್ ಟ್ರಂಪ್ | Photo Credit : AP 

ವಾಶಿಂಗ್ಟನ್, ಆ.20: ಅಮೆರಿಕದ ರಾಷ್ಟ್ರೀಯ ಸಾಲವು ಮೊದಲ ಬಾರಿಗೆ 40 ಟ್ರಿಲಿಯನ್ ಡಾಲರ್ ಗಡಿಯನ್ನು ದಾಟಿದೆ ಎಂದು ಬುಧವಾರ ಬಿಡುಗಡೆಯಾದ ಖಜಾನೆ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ. ಇದು ದೇಶದ ಹೆಚ್ಚುತ್ತಿರುವ ಹಣಕಾಸಿನ ಅಂತರ, ಏರುತ್ತಿರುವ ಬಡ್ಡಿ ವೆಚ್ಚಗಳು ಮತ್ತು ಸರ್ಕಾರದ ಮೇಲಿನ ಹೊಣೆಗಾರಿಕೆಗಳ ಕುರಿತು ಕಳವಳವನ್ನು ಹೆಚ್ಚಿಸಿದೆ.

ಮಂಗಳವಾರದ ವಹಿವಾಟಿನ ಅಂತ್ಯಕ್ಕೆ ಒಟ್ಟು ಸಾರ್ವಜನಿಕ ಸಾಲವು 40 ಟ್ರಿಲಿಯನ್ ಡಾಲರ್ ಆಗಿತ್ತು. ಈ ಮೊತ್ತದಲ್ಲಿ ಸಾರ್ವಜನಿಕರು ಹೊಂದಿರುವ 32.266 ಟ್ರಿಲಿಯನ್ ಡಾಲರ್ ಮತ್ತು ಸರ್ಕಾರದ ಆಂತರಿಕ ಸಾಲವಾದ 7.782 ಟ್ರಿಲಿಯನ್ ಡಾಲರ್ ಸೇರಿದೆ ಎಂದು ಮೂಲಗಳನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ.

ಸಾಲ ಮಾಡುವ ವೇಗವು ಹಿಂದಿನ ಅಂದಾಜುಗಳನ್ನು ಮೀರಿಸಿದೆ. ಅಮೆರಿಕದ ಫೆಡರಲ್ ಸರಕಾರವು ನಿರಂತರ ಕೊರತೆಯನ್ನು ಎದುರಿಸುತ್ತಿದ್ದು, ವೆಚ್ಚ ಮತ್ತು ಆದಾಯದ ನಡುವಿನ ಅಂತರವನ್ನು ಸರಿದೂಗಿಸಲು ಸಾಲ ಮಾಡುತ್ತಿದೆ ಎಂದು ಎಎಫ್ಪಿ. ವರದಿ ಮಾಡಿದೆ.

ಆಳವಾದ ಆರ್ಥಿಕ ಬಿಕ್ಕಟ್ಟನ್ನು ತಡೆಗಟ್ಟಲು ತೆರಿಗೆಗಳನ್ನು ಹೆಚ್ಚಿಸಬೇಕಾಗಬಹುದು, ವೆಚ್ಚವನ್ನು ಕಡಿಮೆ ಮಾಡಬೇಕಾಗಬಹುದು ಅಥವಾ ಎರಡೂ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಬಹುದು ಎಂದು ಬಜೆಟ್ ನಿಗಾ ಸಂಸ್ಥೆಗಳು ಎಚ್ಚರಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News