Bangladesh | ನೂತನ ಅಧ್ಯಕ್ಷರಾಗಿ ಮಿರ್ಜಾ ಫಕ್ರುಲ್ ಆಯ್ಕೆ
Update: 2026-08-20 22:40 IST
ಮಿರ್ಜಾ ಫಕ್ರು | Photo Credit : AP
ಢಾಕ, ಆ. 20: ಆಡಳಿತಾರೂಢ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (BNP) ಅಭ್ಯರ್ಥಿ ಮಿರ್ಜಾ ಫಕ್ರುಲ್ ಇಸ್ಲಾಂ ಆಲಂಗೀರ್ ಅವರು ಬಾಂಗ್ಲಾದೇಶದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ದೇಶದಲ್ಲಿ 35 ವರ್ಷಗಳ ನಂತರ ನಡೆದ ಮೊದಲ ಸ್ಪರ್ಧಾತ್ಮಕ ಅಧ್ಯಕ್ಷೀಯ ಚುನಾವಣೆಯಲ್ಲಿ 78 ವರ್ಷದ BNP ನಾಯಕ ಆಲಂಗೀರ್ ಅವರು ಲಿಬರಲ್ ಡೆಮಾಕ್ರಟಿಕ್ ಪಾರ್ಟಿಯ ಅಧ್ಯಕ್ಷ ಮತ್ತು 11 ಪಕ್ಷಗಳ ವಿರೋಧ ಪಕ್ಷದ ಒಕ್ಕೂಟದ ಅಭ್ಯರ್ಥಿಯಾಗಿದ್ದ ಕರ್ನಲ್ (ನಿವೃತ್ತ) ಒಲಿ ಅಹಮದ್ ಅವರನ್ನು ಸೋಲಿಸಿದರು.
ಆಲಂಗೀರ್ 255 ಮತಗಳನ್ನು ಪಡೆದರೆ, ಒಲಿ ಅಹಮದ್ 88 ಮತಗಳನ್ನು ಪಡೆದಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತರು ಘೋಷಿಸಿದ್ದಾರೆ. ಆಲಂಗೀರ್ ಅವರು ಶುಕ್ರವಾರ ಸಂಜೆ ಬಾಂಗ್ಲಾದೇಶದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ.