×
Ad

ಇಸ್ರೇಲ್-ಹಮಾಸ್ ಕದನ ಇನ್ನೂ ಎರಡು ದಿನ ವಿರಾಮ ವಿಸ್ತರಣೆ

Update: 2023-11-30 23:09 IST

Photo- PTI

ಟೆಲ್ ಅವೀವ್ : ತಮ್ಮ ಕದನವಿರಾಮವನ್ನು ಇನ್ನೂ ಎರಡು ದಿನಗಳವರೆಗೆ ವಿಸ್ತರಿಸಲು ಇಸ್ರೇಲ್ ಹಾಗೂ ಹಮಾಸ್ ಗುರುವಾರ ಸಮ್ಮತಿಸಿವೆ. ಕದನ ವಿರಾಮದ ವಿಸ್ತರಣೆಯು, ಫೆಲೆಸ್ತೀನ್ ಹೋರಾಟಗಾರರ ವಶದಲ್ಲಿರುವ ಒತ್ತೆಯಾಳುಗಳು ಹಾಗೂ ಇಸ್ರೇಲ್ನ ಬಂಧನದಲ್ಲಿರುವ ಪೆಲೆಸ್ತೀನಿಯರನ್ನು ವಿನಿಮಯ ಮಾಡಿಕೊಳ್ಳುವ ಪ್ರಕ್ರಿಯೆಯು ಮುಂದುವರಿಯುವ ಹಾಗೂ ಗಾಝಾದ ಮೇಲೆ ಇಸ್ರೇಲ್ನ ವಿನಾಶಕಾರಿಯಾದ ದಾಳಿಯು ಸ್ಥಗಿತಗೊಳ್ಳುವ ಸೂಚನೆಯನ್ನು ನೀಡಿದೆ.

ಇಸ್ರೇಲ್ ಹಾಗೂ ಹಮಾಸ್ ಘೋಷಿಸಿದ ನಾಲ್ಕು ದಿನಗಳ ಕದನವಿರಾಮದ ಅವಧಿಯಲ್ಲಿ ನಡೆದ ನಾಲ್ಕನೆ ಬಾರಿಗೆ ನಡೆದ ಕೈದಿಗಳ ವಿನಿಮಯ ಪ್ರಕ್ರಿಯೆಯಡಿ 11 ಮಂದಿ ಇಸ್ರೇಲಿ ಮಹಿಳೆಯರು, ಮಕ್ಕಳನ್ನು ಹಮಾಸ್ ಬಿಡುಗಡೆಗೊಳಿಸಿದ್ದು, ಅವರು ಸೋಮವಾರ ರಾತ್ರಿ ಇಸ್ರೇಲ್ ಪ್ರವೇಶಿಸಿದರು. ನಾಲ್ಕು ದಿನಗಳ ಕದನವಿರಾಮವು ಕಳೆದ ಶುಕ್ರವಾರ ಆರಂಭಗೊಂಡಿದ್ದು ಮಂಗಳವಾರ ಕೊನೆಗೊಂಡಿತ್ತು.

ಇದೇ ವೇಳೆ ಇಸ್ರೇಲ್ ಸೇನೆ ಬಿಡುಗಡೆಗೊಳಿಸಿದ 33 ಮಂದಿ ಪೆಲೆಸ್ತೀನ್ ಕೈದಿಳು ಮಂಗಳವಾರ ಮುಂಜಾನೆ ಪಶ್ಚಿಮದಂಡೆಯ ರಮಲ್ಲಾ ನಗರವನ್ನು ತಲುಪಿದ್ದಾರೆ.

ರಮಲ್ಲಾ ನಗರದ ರಸ್ತೆಯಲ್ಲಿ ಫೆಲೆಸ್ತೀನಿಯನ್ ಕೈದಿಗಳಿದ್ದ ಬಸ್ ಹಾದುಹೋದಾಗ ಅವರನ್ನು ನಾಗರಿಕರು ಹರ್ಷೋದ್ಘಾರಗಳೊಂದಿಗೆ ಸ್ವಾಗತಿಸಿದರು.

ಹಮಾಸ್ ಹಾಗೂ ಇಸ್ರೇಲ್ ನಡುವೆ ಎರಡು ದಿನಗಳ ಕದನವಿರಾಮ ಏರ್ಪಟ್ಟಿರುವುದನ್ನು ಖತರ್ ಗುರುವಾರ ಘೋಷಿಸಿದೆ. ಇದರೊಂದಿಗೆ ಕದನವಿರಾಮ ಇನ್ನಷ್ಟು ವಿಸ್ತರಣೆಯಾಗುವ ಹಾಗೂ ಗಾಝಾಕ್ಕೆ ಮಾನವೀಯ ನೆರವು ಅಧಿಕ ಪ್ರಮಾಣದಲ್ಲಿ ಹರಿದುಬರಲು ಸಾಧ್ಯವಾಗುವ ಆಶಾವಾದ ಮೂಡಿದೆ.

ಪ್ರತಿ 10 ಹೆಚ್ಚುವರಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದಂತೆ ತಾನು ಕದನವಿರಾಮವನ್ನು ಒಂದು ದಿನದಂತೆ ವಿಸ್ತರಿಸುವುದಾಗಿ ಇಸ್ರೇಲ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News