ಫೆಲೆಸ್ತೀನೀಯರ ಹತ್ಯಾಕಾಂಡ ಅಂತ್ಯವಾಗಲಿ: ಇರಾನ್ ಆಗ್ರಹ
Update: 2023-10-17 23:40 IST
Photo : PTI
ಟೆಹ್ರಾನ್: ಗಾಝಾ ಪಟ್ಟಿಯಲ್ಲಿ ನಡೆಸುತ್ತಿರುವ ಹತ್ಯಾಕಾಂಡವನ್ನು ಇಸ್ರೇಲ್ ತಕ್ಷಣ ನಿಲ್ಲಿಸಬೇಕು ಎಂದು ಇರಾನ್ ಪರಮೋಚ್ಛ ಮುಖಂಡ ಅಯತೊಲ್ಲ ಆಲಿ ಖಾಮಿನೈ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಗಾಝಾದಲ್ಲಿ ಯೆಹೂದಿ ಆಡಳಿತ ನಡೆಸುತ್ತಿರುವ ಫೆಲೆಸ್ತೀನೀಯರ ನರಮೇಧಕ್ಕೆ ಜಗತ್ತೇ ಸಾಕ್ಷಿಯಾಗಿದೆ. ಗಾಝಾದ ಮೇಲಿನ ಬಾಂಬ್ ದಾಳಿ ತಕ್ಷಣವೇ ನಿಲ್ಲಬೇಕು. ಫೆಲೆಸ್ತೀನೀಯರ ವಿರುದ್ಧದ ಇಸ್ರೇಲ್ ನ ಅಪರಾಧ ಇದೇ ರೀತಿ ಮುಂದುವರಿದರೆ ಮುಸ್ಲಿಮರು ಮತ್ತು ಪ್ರತಿರೋಧ ಪಡೆ(ರೆಸಿಸ್ಟೆನ್ಸ್ ಫೋರ್ಸ್)ಯನ್ನು ಯಾರೂ ಎದುರಿಸಲು ಸಾಧ್ಯವಿಲ್ಲ’ ಎಂದವರು ಹೇಳಿದ್ದಾರೆ.