ಇಸ್ರೇಲ್ ಗಾಝಾವನ್ನು ಆಕ್ರಮಿಸುವುದಿಲ್ಲ : ಟ್ರಂಪ್ ಘೋಷಣೆ
Update: 2025-09-30 19:51 IST
Donald Trump. Photo; AP/PTI
ವಾಷಿಂಗ್ಟನ್: ಇಸ್ರೇಲ್ ಗಾಝಾವನ್ನು ಆಕ್ರಮಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಘೋಷಿಸಿದ್ದು ಗಾಝಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವನ್ನು ಕೊನೆಗೊಳಿಸಬಹುದಾದ ಒಪ್ಪಂದಕ್ಕೆ ಅತೀ ಹತ್ತಿರದಲ್ಲಿದ್ದೇವೆ ಎಂದು ಹೇಳಿದ್ದಾರೆ.
ಭಯೋತ್ಪಾದನೆಯ ದಬ್ಬಾಳಿಕೆ ಕೊನೆಗೊಳ್ಳಬೇಕಾಗಿದೆ. ಒಂದು ವೇಳೆ ಹಮಾಸ್ ಗಾಝಾ ಯೋಜನೆ ತಿರಸ್ಕರಿಸಿದರೆ ಇಸ್ರೇಲ್‍ಗೆ ಅಮೆರಿಕ ಪೂರ್ಣ ಬೆಂಬಲ ನೀಡುತ್ತದೆ. ನೆತನ್ಯಾಹು ಏನು ಮಾಡಿದರೂ ನಮ್ಮ ಬೆಂಬಲವಿರುತ್ತದೆ. ಅಂತಿಮ ಫಲಿತಾಂಶ ಈ ಪ್ರದೇಶದಲ್ಲಿ ಉಂಟಾಗಿರುವ ಅಪಾಯವನ್ನು ನಿವಾರಿಸುವುದು ಮತ್ತು ಆ ಅಪಾಯವು ಹಮಾಸ್‍ನಿಂದ ಉಂಟಾಗುತ್ತದೆ. ಯೋಜನೆಗೆ ಒಪ್ಪಿರುವ ಇಸ್ರೇಲ್‍ಗೆ ಧನ್ಯವಾದಗಳು. ಇವತ್ತು ಶಾಂತಿಗಾಗಿ ಒಂದು ಐತಿಹಾಸಿಕ ದಿನ. ಇದನ್ನು ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿ ಎಂದು ಕರೆಯೋಣ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.