×
Ad

ಜೆನಿನ್‌ನಲ್ಲಿ ಇಸ್ರೇಲಿ ಪಡೆಗಳಿಂದ ಫೆಲೆಸ್ತೀನಿನ ನಿರಾಶ್ರಿತ ಶಿಬಿರದ ಮೇಲೆ ದಾಳಿ: ಕನಿಷ್ಠ 6 ಮಂದಿ ಮೃತ್ಯು

Update: 2025-01-21 19:01 IST

PC : aljazeera.com

ಜೆರುಸೆಲೆಂ : ಗಾಝಾದಲ್ಲಿ ಕದನ ವಿರಾಮ ಘೋಷಿಸಿದ್ದರೂ, ಕಾರ್ಯಾಚರಣೆ ಮುಂದುವರಿಸಿರುವ ಇಸ್ರೇಲ್ ಮಿಲಿಟರಿ ಪಡೆಯು ಪಶ್ಚಿಮ ದಂಡೆಯ ಜೆನಿನ್ ನಿರಾಶ್ರಿತರ ಶಿಬಿರದ ಮೇಲೆ ನಡೆಸಿದ ದಾಳಿಯಲ್ಲಿ ಕನಿಷ್ಠ 6 ಮಂದಿ ಮೃತಪಟ್ಟು, 35 ಜನರು ಗಾಯಗೊಂಡಿದ್ದಾರೆ ಎಂದು ಫೆಲೆಸ್ತೀನಿನ ಆರೋಗ್ಯ ಸಚಿವಾಲಯ ತಿಳಿಸಿದೆ.

ಸೈನಿಕರು, ಪೊಲೀಸರು ಮತ್ತು ಗುಪ್ತಚರ ಸೇವೆಗಳು ಹೋರಾಟಗಾರರ ನಿಗ್ರಹ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಇಸ್ರೇಲ್ ಸೇನೆ ಮೊದಲೇ ಹೇಳಿತ್ತು. ಆದರೆ ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ.

ಇಸ್ರೇಲ್ ಪಡೆಗಳು "ನಾಗರಿಕರು ಮತ್ತು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ್ದರಿಂದ, ಹಲವಾರು ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ಗಾಯಗೊಂಡರು. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ" ಎಂದು ಫೆಲೆಸ್ತೀನಿನ ಪ್ರಾಧಿಕಾರದ ಭದ್ರತಾ ಪಡೆಗಳ ವಕ್ತಾರರು ಹೇಳಿಕೆಯಲ್ಲಿ ಹೇಳಿದರು.

ಈ ಕಾರ್ಯಾಚರಣೆಯು "ಹೋರಾಟಗಾರರನ್ನು ನಿರ್ಮೂಲನೆ ಮಾಡುವ" ಗುರಿಯನ್ನು ಹೊಂದಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. "ವೈಮಾನಿಕ ದಾಳಿ, ಮತ್ತು ಇಸ್ರೇಲಿ ಮಿಲಿಟರಿ ಟ್ಯಾಂಕರ್‌ಗಳನ್ನು ಬಳಸಿ ನಿರಾಶ್ರಿತರ ಶಿಬಿರದ ಮೇಲೆ ಆಕ್ರಮಣ ಮಾಡಲಾಗಿದೆ" ಎಂದು ಹೇಳಿದ್ದಾರೆ ಎಂದು ಜೆನಿನ್ ಗವರ್ನರ್ ಕಮಲ್ ಅಬು ಅಲ್-ರಬ್ ಹೇಳಿದ್ದಾರೆ ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News