×
Ad

ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್‌ನಿಂದ ವೈಮಾನಿಕ ದಾಳಿ

Update: 2026-06-13 21:50 IST

Photo Credit : @DmodosCutter

ಬೈರೂತ್, ಜೂ.13: ಲೆಬನಾನ್‍ನ ದಕ್ಷಿಣ ಭಾಗದ ಮೇಲೆ ಶನಿವಾರ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು ಓರ್ವ ಅಧಿಕಾರಿ ಮೃತಪಟ್ಟಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ನಬಾತಿಯಾ ನಗರ ಸೇರಿದಂತೆ 20ಕ್ಕೂ ಹೆಚ್ಚು ಸ್ಥಳಗಳ ನಿವಾಸಿಗಳಿಗೆ ಸ್ಥಳಾಂತರಗೊಳ್ಳುವಂತೆ ದಾಳಿಗೂ ಮುನ್ನ ಇಸ್ರೇಲ್ ಸೇನೆಯು ಎಚ್ಚರಿಕೆ ನೀಡಿತ್ತು. ಎಚ್ಚರಿಕೆಯ ವ್ಯಾಪ್ತಿಗೆ ಒಳಪಟ್ಟ ಹಾಗೂ ಸ್ಥಳಾಂತರದ ನೋಟಿಸ್‍ನಲ್ಲಿ ಉಲ್ಲೇಖಿಸದ ಇತರ ಹಲವಾರು ಪ್ರದೇಶಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ. ರಿಹಾನ್‍ನಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಸ್ಥಳೀಯ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಈ ಮಧ್ಯೆ, ದಕ್ಷಿಣ ಲೆಬನಾನ್‍ನ ಪಟ್ಟಣವೊಂದರ ಕಡೆಗೆ ಮುನ್ನಗ್ಗುತ್ತಿದ್ದ ಇಸ್ರೇಲ್‌ ಪಡೆಗಳನ್ನು ತನ್ನ ಹೋರಾಟಗಾರರು ಎದುರಿಸಿದ್ದಾರೆ. ಸರಣಿ ರಾಕೆಟ್ ದಾಳಿಗಳನ್ನು ನಡೆಸಿ ಅವರು ಹಿಮ್ಮೆಟ್ಟುವಂತೆ ಮಾಡಿದ್ದಾರೆ ಎಂದು ಹಿಜ್ಬುಲ್ಲಾ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News