×
Ad

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಅಶಾಂತಿಯ ಬಗ್ಗೆ ವರದಿ ಮಾಡಿದ ಪತ್ರಕರ್ತನ ಬಂಧನ

Update: 2026-06-13 21:50 IST

ಪತ್ರಕರ್ತ ಸೊಹ್ರಾಬ್ ಬರ್ಕತ್ | Photo Credit : Sohrab Barkat/YouTube

ಇಸ್ಲಮಾಬಾದ್, ಜೂ.13: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ನಡೆಯುತ್ತಿರುವ ಅಶಾಂತಿಯ ಬಗ್ಗೆ ವರದಿ ಮಾಡಿದ ಪತ್ರಕರ್ತ ಸೊಹ್ರಾಬ್ ಬರ್ಕತ್ ಅವರನ್ನು ವಿವಾದಾತ್ಮಕ ಸೈಬರ್ ಅಪರಾಧ ಕಾಯ್ದೆಯಡಿ ಬಂಧಿಸಲಾಗಿದೆ. ಇತ್ತೀಚೆಗೆ ಈ ಪ್ರದೇಶದಲ್ಲಿ ನಡೆದ ಪ್ರತಿಭಟನೆಗಳ ಕುರಿತು ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ವರದಿಗಳನ್ನು ಪ್ರಕಟಿಸಿದ ನಂತರ, ಜೂನ್ 5 ರಂದು ಇಸ್ಲಾಮಾಬಾದ್‍ನಲ್ಲಿರುವ ಬರ್ಕತ್ ಅವರ ನಿವಾಸದಲ್ಲಿ ಅವರನ್ನು ಬಂಧಿಸಲಾಯಿತು ಎಂದು ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ವರದಿ ಮಾಡಿದೆ.

ಅಧಿಕಾರಿಗಳು ಅವರ ಮೊಬೈಲ್ ಫೋನ್ ಮತ್ತು ಕಾರಿನ ಕೀಗಳನ್ನು ವಶಪಡಿಸಿಕೊಂಡಿದ್ದು ಬಳಿಕ ರಾಷ್ಟ್ರೀಯ ಸೈಬರ್ ಅಪರಾಧ ತನಿಖಾ ಸಂಸ್ಥೆ ಎಫ್‍ಐಆರ್ ದಾಖಲಿಸಿದೆ. ಬರ್ಕತ್ ಅವರು ಪಾಕಿಸ್ತಾನದ ಸೈಬರ್ ಅಪರಾಧಗಳ ತಡೆಗಟ್ಟುವಿಕೆ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಎಫ್‍ಐಆರ್‍ನಲ್ಲಿ ಆರೋಪಿಸಲಾಗಿದೆ. ಈ ಕಾಯ್ದೆಯು `ನಕಲಿ' ಅಥವಾ `ಸುಳ್ಳು' ಎಂದು ಪರಿಗಣಿಸಲಾದ ಮಾಹಿತಿಯ ಪ್ರಸಾರವನ್ನು ಅಪರಾಧವೆಂದು ಪರಿಗಣಿಸುತ್ತದೆ ಮತ್ತು ಇದಕ್ಕೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

ಸಿಪಿಜೆಯ ಅಫ್ಘಾನಿಸ್ತಾನ್-ಪಾಕಿಸ್ತಾನ ಪ್ರತಿನಿಧಿ ವಲಿಯುಲ್ಲಾ ರೆಹಮಾನಿ ಅವರು ಪತ್ರಕರ್ತರನ್ನು ತಕ್ಷಣವೇ ಬಿಡುಗಡೆ ಮಾಡಲು, ವಶಪಡಿಸಿಕೊಂಡ ವಸ್ತುಗಳನ್ನು ಹಿಂತಿರುಗಿಸಲು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News