×
Ad

ಹಿಜ್ಬುಲ್ಲಾ ರಾಕೆಟ್ ದಾಳಿಯಲ್ಲಿ ಇಸ್ರೇಲ್ ಸೇನಾಧಿಕಾರಿ ಮೃತ್ಯು

Update: 2024-07-05 11:42 IST

ಮೃತ ಇಸ್ರೇಲ್ ಸೇನಾಧಿಕಾರಿ ಇಟೇ ಗಲೇ (Photo:X/@HenMazzig)

ಜೆರುಸಲೇಮ್: ಗುರುವಾರ ನಡೆದ ಹಿಜ್ಬುಲ್ಲಾ ರಾಕೆಟ್ ದಾಳಿಯಲ್ಲಿ ಇಸ್ರೇಲ್ ಸೇನಾಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಸೇನಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹತ್ಯೆಗೀಡಾಗಿರುವ ಅಧಿಕಾರಿಯನ್ನು 38 ವರ್ಷದ ಇಟೇ ಗಾಲೇ ಎಂದು ಗುರುತಿಸಲಾಗಿದ್ದು, ಅವರು ಇಸ್ರೇಲ್ ಸೇನೆಯ 679ನೇ ಸಶಸ್ತ್ರ ಬ್ರಿಗೇಡ್‌ನ 8679ನೇ ಘಟಕದಲ್ಲಿ ಉಪ ಕಂಪನಿ ಕಮಾಂಡರ್ ಆಗಿದ್ದರು.

ಇಸ್ರೇಲ್ ಮೇಲೆ ತೀವ್ರ ಸ್ವರೂಪದ ದಾಳಿ ನಡೆಸುತ್ತಿರುವ ಹಿಜ್ಬುಲ್ಲಾ, ಇಸ್ರೇಲ್ ವಶದಲ್ಲಿರುವ ಗೋಲನ್ ಹೈಟ್ಸ್ ಮೇಲೆ ರಾಕೆಟ್ ದಾಳಿ ನಡೆಸಿದಾಗ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಇತ್ತೀಚೆಗೆ ನೈಋತ್ಯ ಲೆಬನಾನ್‌ನ ಟೈರ್ ನಗರದ ಮೇಲೆ ದಾಳಿ ನಡೆಸಿ, ಹಿಜ್ಬುಲ್ಲಾದ ಹಿರಿಯ ಸೇನಾಧಿಕಾರಿಯನ್ನು ಹತ್ಯೆಗೈದಿದ್ದಕ್ಕೆ ಪ್ರತೀಕಾರವಾಗಿ, ಉತ್ತರ ಇಸ್ರೇಲ್‌ನತ್ತ ಹಿಜ್ಬುಲ್ಲಾ ಪಡೆಗಳು ಸುಮಾರು 200 ರಾಕೆಟ್‌ಗಳು, ಕ್ಷಿಪಣಿಗಳು ಹಾಗೂ ಡ್ರೋನ್ ಅನ್ನು ಉಡಾಯಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News