×
Ad

ಗಾಝಾ | ಇಸ್ರೇಲ್ ದಾಳಿಗೆ ಹಸಿವಿನಿಂದ ಆಹಾರಕ್ಕಾಗಿ ಕಾಯುತ್ತಿದ್ದ 24 ಫೆಲೆಸ್ತೀನ್ ನಾಗರಿಕರು ಮೃತ್ಯು

Update: 2025-06-24 13:02 IST

File Photo: PTI

ಗಾಝಾ : ಇಸ್ರೇಲ್ ಗಾಝಾದಲ್ಲಿ ದಾಳಿಯನ್ನು ಮುಂದುವರಿಸಿದೆ. ಹಸಿದು ಆಹಾರಕ್ಕಾಗಿ ಕಾಯುತ್ತಿದ್ದ 24 ಫೆಲೆಸ್ತೀನ್ ನಾಗರಿಕರು ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು Al Jazeera ವರದಿ ಮಾಡಿದೆ.

ವರದಿಯ ಪ್ರಕಾರ, ಗಾಝಾ ಪಟ್ಟಿಯ ಮಧ್ಯಭಾಗದಲ್ಲಿರುವ ವಾಡಿ ಗಾಝಾದ ದಕ್ಷಿಣಕ್ಕೆ ಸಲಾಹ್ ಅಲ್-ದಿನ್ ಸ್ಟ್ರೀಟ್‌ನಲ್ಲಿ ಆಹಾರಕ್ಕಾಗಿ ಕಾಯುತ್ತಿದ್ದವರ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಗಾಝಾದ ನಾಸರ್ ವೈದ್ಯಕೀಯ ಸಂಕೀರ್ಣ ಮತ್ತು ಅಲ್ ಅವ್ದಾ ಆಸ್ಪತ್ರೆಯಲ್ಲಿ ಸಂತ್ರಸ್ತರ ಮೃತದೇಹಗಳಿರುವುದು ಕಂಡು ಬಂದಿದೆ ಎಂದು ವರದಿಯು ತಿಳಿಸಿದೆ.

ಗಾಝಾದಲ್ಲಿ ಇಸ್ರೇಲ್ ಮತ್ತು ಯುಎಸ್ ಬೆಂಬಲಿತ ನೆರವು ಕೇಂದ್ರ ಮೇ.27ರಂದು ಪ್ರಾರಂಭಿಸಲಾಗಿದೆ. ಇದೇ ನೆರವು ಕೇಂದ್ರದ ಬಳಿ ಇಸ್ರೇಲ್ ನಡೆಸಿದ ದಾಳಿಯಲ್ಲಿ 400ಕ್ಕೂ ಅಧಿಕ ಫೆಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ. 1,000 ಜನರು ಗಾಯಗೊಂಡಿದ್ದಾರೆ ಎಂದು ವರದಿಯು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News