ಗಾಝಾ ನಗರವನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ನಿಂದ ದಾಳಿ : ಕನಿಷ್ಠ 14 ಮಂದಿ ಮೃತ್ಯು
Update: 2025-09-20 21:55 IST
PC : aljazeera.com
ಗಾಝಾ, ಸೆ.20: ಗಾಝಾ ನಗರದ ಮೇಲೆ ಶುಕ್ರವಾರ ತಡರಾತ್ರಿಯಿಂದ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 14 ಮಂದಿ ಮೃತಪಟ್ಟಿರುವುದಾಗಿ ಗಾಝಾದ ಆರೋಗ್ಯಾಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಗಾಝಾ ನಗರದ ಮನೆಯೊಂದರ ಮೇಲೆ ಶನಿವಾರ ಬೆಳಿಗ್ಗೆ ನಡೆದ ದಾಳಿಯಲ್ಲಿ ಒಂದೇ ಕುಟುಂಬದ 6 ಮಂದಿ ಮೃತಪಟ್ಟಿದ್ದಾರೆ. ಇದೇ ಪ್ರದೇಶದಲ್ಲಿ ನಡೆದ ಪ್ರತ್ಯೇಕ ದಾಳಿಯಲ್ಲಿ ಮೂವರು ಮೃತಪಟ್ಟಿದ್ದು ಇತರ ಕೆಲವರು ಗಾಯಗೊಂಡಿದ್ದಾರೆ. ಅಲ್-ತುಫಾಹ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಮಧ್ಯೆ, ಫೆಲೆಸ್ತೀನಿಯನ್ ರಾಷ್ಟ್ರವನ್ನು ಗುರುತಿಸುವುದಾಗಿ ಪೋರ್ಚುಗಲ್‍ನ ವಿದೇಶಾಂಗ ಇಲಾಖೆ ಹೇಳಿದೆ.