×
Ad

ಗಾಝಾದಲ್ಲಿ ಇಸ್ರೇಲ್ ಪಡೆಯಿಂದ 2 ತಿಂಗಳಲ್ಲಿ ಸಾವಿರಕ್ಕೂ ಹೆಚ್ಚು ಜನರ ಹತ್ಯೆ: ವಿಶ್ವಸಂಸ್ಥೆ

Update: 2025-07-22 23:13 IST

Photo | news.un.org (ಸಾಂದರ್ಭಿಕ ಚಿತ್ರ)

ಜಿನೆವಾ: ಗಾಝಾದಲ್ಲಿ ಅಮೆರಿಕ ಮತ್ತು ಇಸ್ರೇಲ್ ಬೆಂಬಲಿತ ಜಿಎಚ್‍ಎಫ್ ನೆರವು ವಿತರಣೆಯನ್ನು ಪ್ರಾರಂಭಿಸಿದ 2 ತಿಂಗಳಲ್ಲೇ ನೆರವು ಪಡೆಯಲು ಪ್ರಯತ್ನಿಸಿದ ಸಾವಿರಕ್ಕೂ ಅಧಿಕ ಫೆಲೆಸ್ತೀನೀಯರನ್ನು ಇಸ್ರೇಲ್ ಮಿಲಿಟರಿ ಹತ್ಯೆ ಮಾಡಿದೆ ಎಂದು ವಿಶ್ವಸಂಸ್ಥೆ ಮಂಗಳವಾರ ಹೇಳಿದೆ.

ಮೇ 26ರಿಂದ ಗಾಝಾದಲ್ಲಿ ಜಿಎಚ್‍ಎಫ್‍ನ ಕಾರ್ಯಾಚರಣೆ ಪ್ರಾರಂಭಗೊಂಡಿದ್ದು ಜುಲೈ 21ರವರೆಗೆ 1.4 ದಶಲಕ್ಷಕ್ಕೂ ಹೆಚ್ಚು ಆಹಾರದ ಪೊಟ್ಟಣಗಳನ್ನು ವಿತರಿಸಿರುವುದಾಗಿ ಸಂಸ್ಥೆ ಹೇಳಿದೆ. ಆದರೆ ನೆರವು ವಿತರಣಾ ಕೇಂದ್ರದ ಬಳಿ ನೂಕುನುಗ್ಗಲು, ಅವ್ಯವಸ್ಥೆ, ಗೊಂದಲದಿಂದಾಗಿ ಪ್ರತೀ ದಿನ ಸಾವು-ನೋವಿನ ಪ್ರಕರಣ ವರದಿಯಾಗಿದೆ.

ಜುಲೈ 21ರ ವರದಿಯಂತೆ ಆಹಾರ ಪಡೆಯಲು ಪ್ರಯತ್ನಿಸುತ್ತಿದ್ದಾಗ 1,054 ಮಂದಿ ಸಾವನ್ನಪ್ಪಿರುವುದನ್ನು ದಾಖಲಿಸಲಾಗಿದೆ. ಇದರಲ್ಲಿ 766 ಪ್ರಕರಣ ಜಿಎಚ್‍ಎಫ್ ಕೇಂದ್ರಗಳ ವ್ಯಾಪ್ತಿಯಲ್ಲಿ ಹಾಗೂ 288 ಪ್ರಕರಣ ವಿಶ್ವಸಂಸ್ಥೆ ಹಾಗೂ ಇತರ ಮಾನವೀಯ ನೆರವು ಪೂರೈಕೆ ಸಂಸ್ಥೆಗಳ ವ್ಯಾಪ್ತಿಯಲ್ಲಿ ವರದಿಯಾಗಿದೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಕಚೇರಿಯ ವಕ್ತಾರ ತಮೀಮ್ ಅಲ್-ಖೀತಾನ್‍ರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ಮಂಗಳವಾರ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News