×
Ad

ಗಾಝಾ ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್ ಸಚಿವ ಬೆಜಲೆಲ್ ಸ್ಮೊಟ್ರಿಚ್ ವಿರೋಧ

Update: 2025-10-09 20:31 IST

 ಬೆಜಲೆಲ್ ಸ್ಮೊಟ್ರಿಚ್ |  Photo Credit : NDTV

ಜೆರುಸಲೇಂ, ಅ.9: ಇಸ್ರೇಲ್ ಮತ್ತು ಹಮಾಸ್ ನಡುವಿನ ಗಾಝಾ ಕದನ ವಿರಾಮ ಒಪ್ಪಂದವನ್ನು ವಿರೋಧಿಸುವುದಾಗಿ ಇಸ್ರೇಲ್‍ನ ವಿತ್ತ ಸಚಿವ ಬೆಜಲೆಲ್ ಸ್ಮೊಟ್ರಿಚ್ ಘೋಷಿಸಿದ್ದು ಅದರ ವಿರುದ್ಧವಾಗಿ ಮತ ಚಲಾಯಿಸುವುದಾಗಿ ಹೇಳಿದ್ದಾರೆ.

`ನಮ್ಮ ಜೈಲುಗಳನ್ನು ಖಾಲಿ ಮಾಡಿ, ಮುಂದಿನ ಪೀಳಿಗೆಯ ಭಯೋತ್ಪಾದಕ ನಾಯಕರನ್ನು ಬಿಡುಗಡೆಗೊಳಿಸುವುದರಿಂದ ಆಗುವ ಪರಿಣಾಮಗಳ ಬಗ್ಗೆ ವ್ಯಾಪಕ ಭೀತಿಯಿದೆ. ಈ ಕ್ರಮವು ಇಲ್ಲಿ ಯೆಹೂದಿಗಳ ರಕ್ತ ಪ್ರವಾಹ ಮುಂದುವರಿಯಲು ಕಾರಣವಾಗಲಿದೆ. ಈ ಕಾರಣಕ್ಕಾಗಿ ನಾವು ಈ ಒಪ್ಪಂದದ ಪರವಾಗಿ ಮತ ಹಾಕಲಾಗದು' ಎಂದವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ಎಲ್ಲಾ ಒತ್ತೆಯಾಳುಗಳು ಮರಳಲಿದ್ದಾರೆ ಎಂಬುದು ಖುಷಿಯ ವಿಷಯ. ಆದರೆ ಒತ್ತೆಯಾಳುಗಳು ಹಿಂತಿರುಗಿದ ತಕ್ಷಣ ಯುದ್ಧ ಕೊನೆಗೊಳ್ಳಬಾರದು. ಹಮಾಸ್ ಅನ್ನು ಸಂಪೂರ್ಣ ನಿರ್ಮೂಲನೆ ಮಾಡಿ ಗಾಝಾವನ್ನು ಶಸ್ತ್ರಾಸ್ತ್ರ ರಹಿತ ವಲಯವನ್ನಾಗಿಸುವ ಮೂಲಕ ಅದು ಇಸ್ರೇಲ್‍ಗೆ ಮುಂದಿನ ದಿನಗಳಲ್ಲಿ ಬೆದರಿಕೆ ಒಡ್ಡದಂತೆ ಮಾಡುವ ಕಾರ್ಯ ಮುಂದುವರಿಯಬೇಕು' ಎಂದವರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News