×
Ad

ಇಸ್ರೇಲ್ ಆಕ್ರಮಿತ ಪಶ್ಚಿಮದಂಡೆ: ಪ್ರತ್ಯೇಕ ಪ್ರಕರಣದಲ್ಲಿ ನಾಲ್ಕು ಮಂದಿ ಮೃತ್ಯು

Update: 2025-06-26 23:40 IST

Photo: PIT

ಜೆರುಸಲೇಂ: ಆಕ್ರಮಿತ ಪಶ್ಚಿಮದಂಡೆಯಲ್ಲಿ ಬುಧವಾರ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 15 ವರ್ಷದ ಬಾಲಕನ ಸಹಿತ 4 ಮಂದಿ ಹತರಾಗಿರುವುದಾಗಿ ಫೆಲಸ್ತೀನಿಯನ್ ಆರೋಗ್ಯ ಇಲಾಖೆ ಹೇಳಿದೆ.

ಪಶ್ಚಿಮದಂಡೆಯ ಉತ್ತರದ ನಗರ ಅಲ್-ಯಮೌನ್‍ನಲ್ಲಿ ಇಸ್ರೇಲಿ ಯೋಧರ ಗುಂಡಿನ ದಾಳಿಯಲ್ಲಿ 15 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ದಕ್ಷಿಣದ ಕಫರ್ ಮಲಿಕ್ ಗ್ರಾಮದಲ್ಲಿ ಮೂವರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಕಫರ್ ಮಲಿಕ್ ಗ್ರಾಮದಲ್ಲಿ ಇಸ್ರೇಲ್ ಪ್ರಜೆಗಳು ಹಾಗೂ ಫೆಲೆಸ್ತೀನೀಯರ ನಡುವೆ ನಡೆಯುತ್ತಿದ್ದ ಘರ್ಷಣೆಯಲ್ಲಿ ಮಧ್ಯಪ್ರವೇಶಿಸಿದ್ದು ಘರ್ಷಣೆ ನಿರತರನ್ನು ಚದುರಿಸಲು ಗುಂಡು ಹಾರಿಸಲಾಗಿದೆ. ಕಲ್ಲು ತೂರಾಟದಲ್ಲಿ ಓರ್ವ ಭದ್ರತಾ ಸಿಬ್ಬಂದಿಗೆ ಗಾಯವಾಗಿದ್ದು ಐವರು ಇಸ್ರೇಲಿ ಪ್ರಜೆಗಳನ್ನು ಬಂಧಿಸಿರುವುದಾಗಿ ಇಸ್ರೇಲ್ ಭದ್ರತಾ ಪಡೆ (ಐಡಿಎಫ್) ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News