ಗಾಝಾ: ಇಸ್ರೇಲ್ ದಾಳಿಯಲ್ಲಿ ರೆಡ್ ಕ್ರೆಸೆಂಟ್ ಸಿಬ್ಬಂದಿ ಮೃತ್ಯು
Update: 2025-08-03 20:59 IST
Photo: Palestine RCS
ರಮಲ್ಲಾ, ಆ.3: ಗಾಝಾದ ಖಾನ್ ಯೂನಿಸ್ನಲ್ಲಿರುವ ಪೆಲೆಸ್ತೀನಿಯನ್ ರೆಡ್ ಕ್ರೆಸೆಂಟ್ ಸೊಸೈಟಿಯ ಕೇಂದ್ರ ಕಚೇರಿಯ ಮೇಲೆ ರವಿವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಓರ್ವ ಸಿಬ್ಬಂದಿ ಮೃತಪಟ್ಟಿದ್ದು ಇತರ ಮೂವರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಖಾನ್ ಯೂನಿಸ್ ನಗರದಲ್ಲಿರುವ ರೆಡ್ಕ್ರೆಸೆಂಟ್ ಕಚೇರಿಯ(ಪಿಆರ್ಸಿಎಸ್) ಮೇಲಿನ ವೈಮಾನಿಕ ದಾಳಿಯ ಬಳಿಕ ಕಟ್ಟಡದ ಪ್ರಥಮ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿರುವ ವೀಡಿಯೊವನ್ನು ಪಿಆರ್ಸಿಎಸ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.