ಪಾಕಿಸ್ತಾನ | ಬಾಂಬ್ ಸ್ಫೋಟದ ಬಳಿಕ ಹಳಿ ತಪ್ಪಿದ ಜಾಫರ್ ಎಕ್ಸ್‌ಪ್ರೆಸ್ ರೈಲು : ಹಲವರಿಗೆ ಗಾಯ
Update: 2025-10-07 21:18 IST
Photo Credit : NDTV
ಪೇಷಾವರ, ಅ.7: ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿ ರೈಲ್ವೇ ಹಳಿಯಲ್ಲಿ ಬಾಂಬ್ ಸ್ಫೋಟದಿಂದ ಪೇಷಾವರಕ್ಕೆ ತೆರಳುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲಿನ ಐದು ಬೋಗಿಗಳು ಹಳಿತಪ್ಪಿದ್ದು 7 ಪ್ರಯಾಣಿಕರು ಗಾಯಗೊಂಡಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಸಿಂಧ್‍ನ ಶಿಕಾರ್‍ಪುರ್ ಜಿಲ್ಲೆಯ ಸೋಮರ್ವಾ ಬಳಿ ರೈಲ್ವೇ ಹಳಿಯಲ್ಲಿ ಸ್ಫೋಟ ಸಂಭವಿಸಿದ್ದು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ರೈಲ್ವೇ ಹಳಿಗೆ ಹಾನಿಯಾಗಿದ್ದು ಬೋಗಿಗಳು ಹಳಿ ತಪ್ಪಿರುವುದರಿಂದ ರೈಲು ಪ್ರಯಾಣಕ್ಕೆ ತೊಡಕಾಗಿದ್ದು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಬಲೂಚ್ ಬಂಡುಕೋರರ ಗುಂಪು ಬಲೂಚ್ ರಿಪಬ್ಲಿಕನ್ ಗಾಡ್ರ್ಸ್ ಬಾಂಬ್ ಸ್ಫೋಟದ ಹೊಣೆ ವಹಿಸಿಕೊಂಡಿರುವುದಾಗಿ ವರದಿಯಾಗಿದೆ.