×
Ad

ಪಾಕ್ ಸೇನೆಗೆ ನೆರವಾಗಲು ಭಾರತದಲ್ಲಿ ಅಡಗಿರುವ ಸದಸ್ಯರಿಗೆ ಜೈಷ್ ಮತ್ತು ಲಷ್ಕರ್ ಸೂಚನೆ : ವರದಿ

Update: 2025-04-30 21:40 IST

ಸಾಂದರ್ಭಿಕ ಚಿತ್ರ | PC : NDTV 

ಇಸ್ಲಾಮಾಬಾದ್: ಒಂದು ವೇಳೆ ಯುದ್ಧ ಆರಂಭಗೊಂಡರೆ ಭಾರತದೊಳಗಿಂದಲೇ ಪಾಕಿಸ್ತಾನ ಸೇನೆಗೆ ಸಹಾಯ ಮಾಡುವಂತೆ ಭಾರತದಲ್ಲಿ ಅಡಗಿರುವ ತನ್ನ ಸದಸ್ಯರಿಗೆ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜೈಷೆ ಮುಹಮ್ಮದ್ ಮತ್ತು ಲಷ್ಕರೆ ತೈಯಬ ಸೂಚಿಸಿದೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಸಿಎನ್‍ಎನ್-ನ್ಯೂಸ್ 18 ವರದಿ ಮಾಡಿದೆ.

ಎರಡೂ ದೇಶಗಳ ನಡುವೆ ಯುದ್ಧ ಆರಂಭಗೊಂಡರೆ ಹೆದ್ದಾರಿಯನ್ನು ತಡೆಯುವಂತೆ ಭಾರತೀಯ ಪ್ರದೇಶದೊಳಗಿನ ಪೀರ್ ಪಾಂಜಾಲ್ ಶ್ರೇಣಿಯ ಬಳಿ ಅಡಗಿಕೊಂಡಿರುವ ಸದಸ್ಯರಿಗೆ ಜೈಷ್ ಮತ್ತು ಲಷ್ಕರ್ ಸೂಚಿಸಿದೆ. ಅಲ್ಲದೆ ಕಳೆದ ವಾರದ ಪಹಲ್ಗಾಮ್ ದಾಳಿಯ ಬಳಿಕ ಜಮ್ಮು-ಕಾಶ್ಮೀರದ ಆಡಳಿತ ಹಲವಾರು ಉಗ್ರರ ಮನೆಗಳನ್ನು ಧ್ವಂಸಗೊಳಿಸಿದ ರೀತಿಯಲ್ಲಿಯೇ ಪೊಲೀಸ್ ಸಿಬ್ಬಂದಿಗಳ ಮನೆಗೂ ಹಾನಿ ಮಾಡುವಂತೆ ತನ್ನ ಸದಸ್ಯರಿಗೆ ಸೂಚಿಸಿದೆ ಎಂದು ವರದಿಯಾಗಿದೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News