×
Ad

ಜಪಾನ್ ನಲ್ಲಿ 6.6 ತೀವ್ರತೆಯ ಭೂಕಂಪನ; ಸುನಾಮಿ ಎಚ್ಚರಿಕೆ

Update: 2023-10-05 16:02 IST

ಸಾಂದರ್ಭಿಕ ಚಿತ್ರ (PTI) 

ಟೋಕಿಯೊ: ದೇಶದ ಪೂರ್ವ ಭಾಗದ ಕರಾವಳಿಯ ಐಝು ಪೆನಿನ್ಸುಲಾದ ದ್ವೀಪಗಳಿಗೆ ಒಂದು ಮೀಟರ್ ಎತ್ತರದ ಸುನಾಮಿ ಅಪ್ಪಳಿಸುವ ಮುನ್ನೆಚ್ಚರಿಕೆಯನ್ನು ಜಪಾನ್ ನೀಡಿದೆ ಎಂದು reuters.com ವರದಿ ಮಾಡಿದೆ.

ಜಪಾನ್ ಹವಾಮಾನ ಇಲಾಖೆಯ ಪ್ರಕಾರ, ತೋರಿಶಿಮಾ ದ್ವೀಪದ ಬಳಿ ಇಂದು ಬೆಳಗ್ಗೆ 11 ಗಂಟೆ ಸಮಯದಲ್ಲಿ 6.6 ತೀವ್ರತೆಯ ಭೂಕಂಪನ ಸಂಭವಿಸಿದ್ದು, ನಂತರ ಈ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ.

ಭೂಕಂಪದ ಕೇಂದ್ರ ಬಿಂದುವು ಟೋಕಿಯೊದ ಉತ್ತರ ದಿಕ್ಕಿನಿಂದ 550 ಕಿಮೀ (340 ಮೈಲುಗಳು) ದೂರದಲ್ಲಿನ ಪೆಸಿಫಿಕ್ ಸಾಗರವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News