×
Ad

ಡೆಮಾಕ್ರಟಿಕ್ ಅಭ್ಯರ್ಥಿಯಾಗಲು ಸಾಕಷ್ಟು ಪ್ರತಿನಿಧಿಗಳ ಬೆಂಬಲ ಪಡೆದ ಕಮಲಾ ಹ್ಯಾರಿಸ್

Update: 2024-07-23 20:51 IST

ಕಮಲಾ ಹ್ಯಾರಿಸ್ | PC : PTI

ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ನಾಮನಿರ್ದೇಶನವನ್ನು ಗೆಲ್ಲಲು ಸಾಕಾಗುವಷ್ಟು ಡೆಮಾಕ್ರಟಿಕ್ ಪ್ರತಿನಿಧಿಗಳ ಬೆಂಬಲ ಗಳಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿದೆ.

ಮೊದಲ ಮತದಾನದಲ್ಲಿ ನಾಮನಿರ್ದೇಶನವನ್ನು ಗೆಲ್ಲಲು ಅಗತ್ಯವಿರುವ 1,976ಕ್ಕಿಂತಲೂ ಹೆಚ್ಚಿನ ಪ್ರತಿನಿಧಿಗಳ ಬೆಂಬಲವನ್ನು ಇದುವರೆಗೆ ಹ್ಯಾರಿಸ್ ಗಳಿಸಿದ್ದಾರೆ ಪಡೆಯುವಲ್ಲಿ ಎಂದು ಸೋಮವಾರ ರಾತ್ರಿ ಅಧಿಕಾರಿಗಳು ದೃಢಪಡಿಸಿರುವುದಾಗಿ ಸಿಎನ್‌ಎನ್ ವರದಿ ಮಾಡಿದೆ.

`ಇವತ್ತು ನಮ್ಮ ಪಕ್ಷದ ಅಭ್ಯರ್ಥಿಯಾಗಲು ಅಗತ್ಯವಿರುವ ಬೆಂಬಲವನ್ನು ಗಳಿಸಿದ್ದಕ್ಕಾಗಿ ನಾನು ಹೆಮ್ಮೆ ಪಡುತ್ತೇನೆ. ಮುಂದಿನ ತಿಂಗಳು ನಾನು ದೇಶದಾದ್ಯಂತ ಪ್ರಯಾಣಿಸುತ್ತೇನೆ ಮತ್ತು ಎಲ್ಲದರ ಬಗ್ಗೆ ಅಮೆರಿಕನ್ನರೊಂದಿಗೆ ಮಾತನಾಡುತ್ತೇನೆ. ನಮ್ಮ ಪಕ್ಷ ಮತ್ತು ನಮ್ಮ ದೇಶವನ್ನು ಒಗ್ಗೂಡಿಸಲು ಮತ್ತು ಡೊನಾಲ್ಡ್ ಟ್ರಂಪ್‌ರನ್ನು ಸೋಲಿಸಲು ನಾನು ಉದ್ದೇಶಿಸಿದ್ದೇನೆ' ಎಂದು ಕಮಲಾ ಹ್ಯಾರಿಸ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಂಗಳವಾರ ಕಮಲಾ ಹ್ಯಾರಿಸ್ ವಿಸ್ಕಾನ್ಸಿನ್ ರಾಜ್ಯದಲ್ಲಿ ಅಧ್ಯಕ್ಷೀಯ ಚುನಾವಣೆಯ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News