×
Ad

ಇಸ್ರೇಲ್: ಅಪಾರ್ಟ್ಮೆಂಟ್ ನಲ್ಲಿ ಕೇರಳದ ಯುವಕ, ವೃದ್ಧೆಯ ಮೃತದೇಹ ಪತ್ತೆ

Update: 2025-07-05 22:55 IST

Photo : indianexpress

ಟೆಲ್ಅವೀವ್: ವೃದ್ಧ ಮಹಿಳೆಯ ಆರೈಕೆದಾರನಾಗಿ ನೇಮಕಗೊಂಡಿದ್ದ ಕೇರಳ ಮೂಲದ ಯುವಕ ಹಾಗೂ ವೃದ್ಧ ಮಹಿಳೆ ಇಸ್ರೇಲ್ ನ ಮೆವಾಸೆರೆಟ್ ಝಿಯೋನ್ ನಗರದ ಅಪಾರ್ಟ್ಮೆಂಟ್ ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ವರದಿಯಾಗಿದೆ.

ಮೃತ ಯುವಕನನ್ನು ವಯನಾಡಿನ ನಿವಾಸಿ 38 ವರ್ಷದ ಜಿನೇಶ್ ಸುಕುಮಾರನ್ ಎಂದು ಗುರುತಿಸಲಾಗಿದೆ. ವೃದ್ಧ ಮಹಿಳೆಯ ಪತಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು ಅವರ ಆರೈಕೆದಾರನಾಗಿ 2 ತಿಂಗಳ ಹಿಂದೆಯಷ್ಟೇ ಸುಕುಮಾರನ್ ಇಸ್ರೇಲಿಗೆ ತೆರಳಿದ್ದರು. `ಗುರುತಿಸಲಾಗದ ದುಷ್ಕರ್ಮಿಗಳ ದಾಳಿಯ ಬಳಿಕ ಸುಕುಮಾರನ್ ಹಾಗೂ ವೃದ್ಧ ಮಹಿಳೆ ಮೃತಪಟ್ಟಿದ್ದಾರೆ' ಎಂದು ಮೂಲಗಳನ್ನು ಉಲ್ಲೇಖಿಸಿ The Indian Express ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News