ಭಾರತವನ್ನು `ಆರ್ಥಿಕವಾಗಿ' ಸಾಯಿಸಿ : ಸಿಖ್ಖರಿಗೆ ಖಾಲಿಸ್ತಾನ್ ಮುಖಂಡ ಪನ್ನೂನ್ ಆಗ್ರಹ
Update: 2024-10-28 22:14 IST
Photo: X/ firstpost
ನ್ಯೂಯಾರ್ಕ್: ಭಾರತವನ್ನು ಆರ್ಥಿಕವಾಗಿ ಕೊಲ್ಲಬೇಕು ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹಂತಕ ಬಿಯಾಂತ್ ಸಿಂಗ್ ಗೆ ಅಕ್ಟೋಬರ್ 31ರಂದು ವಂದನೆ ಸಲ್ಲಿಸುವಂತೆ ಖಾಲಿಸ್ತಾನ್ ಮುಖಂಡ ಗುರುಪತ್ವಂತ್ ಸಿಂಗ್ ಪನ್ನೂನ್ ಸಿಖ್ ಸಮುದಾಯದವರನ್ನು ಆಗ್ರಹಿಸಿದ್ದಾನೆ.
ಹೊಸ ವೀಡಿಯೊ ಸಂದೇಶ ಬಿಡುಗಡೆ ಮಾಡಿರುವ ಪನ್ನೂನ್ ಅಮೆರಿಕ, ಕೆನಡಾ, ಬ್ರಿಟನ್, ಜರ್ಮನಿ, ಆಸ್ಟ್ರೇಲಿಯಾ ಸೇರಿದಂತೆ ಕೆಲವು ನಿರ್ದಿಷ್ಟ ದೇಶಗಳಿಗೆ ಪ್ರಯಾಣಿಸುವ ಏರಿಂಡಿಯಾ ವಿಮಾನಗಳಿಗೆ ಬೆದರಿಕೆ ಒಡ್ಡಿದ್ದಾನೆ. ಮೇಡ್ ಇನ್ ಇಂಡಿಯಾ ಉಪಕ್ರಮವಾಗಿರುವ ಏರಿಂಡಿಯಾವನ್ನು ಗುರಿಯಾಗಿಸುವಂತೆ ಮತ್ತು ಆಮೇಲೆ ಭಾರತವನ್ನು ವಿಭಜಿಸುವಂತೆ ಸಿಖ್ ಸಮುದಾಯವನ್ನು ಆಗ್ರಹಿಸಿರುವುದಾಗಿ ವರದಿಯಾಗಿದೆ.