×
Ad

ಇಂಡೋನೇಶ್ಯದಲ್ಲಿ ಭೂಕುಸಿತ: ಕನಿಷ್ಟ 14 ಮಂದಿ ಸಾವು

Update: 2024-04-14 22:15 IST

ಜಕಾರ್ತ: ಇಂಡೊನೇಶ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಸುಲಾವೆಸಿ ದ್ವೀಪದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಟ 14 ಮಂದಿ ಮೃತಪಟ್ಟಿರುವುದಾಗಿ ವಿಪತ್ತು ನಿರ್ವಹಣಾ ಏಜೆನ್ಸಿಯ ಅಧಿಕಾರಿಗಳು ರವಿವಾರ ಹೇಳಿದ್ದಾರೆ.

ದಕ್ಷಿಣ ಸುಲಾವೆಸಿ ದ್ವೀಪದ ತನಾ ತೊರಾಜ ಪ್ರದೇಶದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಎರಡು ಗ್ರಾಮಗಳು ಜಲಾವೃತಗೊಂಡಿದ್ದು 4 ಮನೆಗಳು ಹಾನಿಗೊಂಡಿವೆ. ಕನಿಷ್ಟ ಇಬ್ಬರು ನಾಪತ್ತೆಯಾಗಿರುವ ಮಾಹಿತಿಯಿದ್ದು ಶೋಧ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ವಿಪತ್ತು ನಿರ್ವಹಣಾ ಏಜೆನ್ಸಿಯ ವಕ್ತಾರರು ಹೇಳಿದ್ದಾರೆ. ಮಳೆ ಮುಂದುವರಿದಿರುವುದರಿಂದ ಹಾಗೂ ರಸ್ತೆ ಸಂಚಾರಕ್ಕೆ ತೊಡಕಾಗಿರುವುದರಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಇಂಡೊನೇಶ್ಯಾದಲ್ಲಿ ಜನವರಿಯಿಂದ ಮಳೆಗಾಲ ಆರಂಭಗೊಂಡಿದ್ದು ಸುಮಾತ್ರ ದ್ವೀಪದಲ್ಲಿ ಕಳೆದ ತಿಂಗಳು ನೆರೆ ಮತ್ತು ಪ್ರವಾಹದಿಂದ 26 ಮಂದಿ ಸಾವನ್ನಪ್ಪಿದ್ದು ನೂರಾರು ಮನೆಗಳಿಗೆ ಹಾನಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News