×
Ad

ಲೆಬನಾನ್ ಬಿಕ್ಕಟ್ಟು ಚರ್ಚೆಗೆ ಇಯು ತುರ್ತು ಸಭೆ

Update: 2024-09-30 20:47 IST

 ಜೋಸೆಫ್ ಬೊರೆಲ್ |  PC : instagram.com

ಬ್ರಸೆಲ್ಸ್: ಲೆಬನಾನ್‍ನಲ್ಲಿ ಇತ್ತೀಚೆಗೆ ಉಲ್ಬಣಿಸಿರುವ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಲು ಯುರೋಪಿಯನ್ ಯೂನಿಯನ್ (ಇಯು) ವಿದೇಶಾಂಗ ಸಚಿವರ ತುರ್ತು ಸಭೆ ನಡೆದಿರುವುದಾಗಿ ವರದಿಯಾಗಿದೆ.

ಯುರೋಪಿಯನ್ ಯೂನಿಯನ್‍ನ ವಿದೇಶಾಂಗ ನೀತಿಗಳ ಮುಖ್ಯಸ್ಥ ಜೋಸೆಫ್ ಬೊರೆಲ್ ಅಧ್ಯಕ್ಷತೆಯಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆದ ಸಭೆಯಲ್ಲಿ ಯೂನಿಯನ್‍ನ 27 ಸದಸ್ಯದೇಶಗಳ ವಿದೇಶಾಂಗ ಸಚಿವರು ಪಾಲ್ಗೊಂಡು ಲೆಬನಾನ್‍ನಲ್ಲಿ ಇತ್ತೀಚಿನ ಬೆಳವಣಿಗೆ ಹಾಗೂ ಇದಕ್ಕೆ ಇಯು ಪ್ರತಿಕ್ರಿಯೆ ಬಗ್ಗೆ ಚರ್ಚೆ ನಡೆಸಿದ್ದಾರೆ.

ಕಳೆದ ಸುಮಾರು 1 ವರ್ಷದಿಂದ ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ಸಂಘರ್ಷ, ಹಿಂಸಾಚಾರ ಖಂಡಿಸಿ ಒಮ್ಮತದ ಹೇಳಿಕೆ ನೀಡಲು ಅಥವಾ ಘರ್ಷಣೆ ಅಂತ್ಯಗೊಳಿಸುವ ನಿಟ್ಟಿನಲ್ಲಿ ಪ್ರಭಾವ ಬೀರಲು ಇಯು ಇದುವರೆಗೆ ವಿಫಲವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News