×
Ad

Lebanon | ಹಿಜ್ಬುಲ್ಲಾ ಪ್ರಧಾನ ಕಚೇರಿಯ ಮೇಲೆ ಇಸ್ರೇಲ್ ನಿಂದ ದಾಳಿ

Update: 2026-06-14 20:40 IST

ಸಾಂದರ್ಭಿಕ ಚಿತ್ರ | Photo Credit : aljazeera.com

ಬೈರೂತ್, ಜೂ.14: ಲೆಬನಾನ್ ರಾಜಧಾನಿ ಬೈರೂತ್‌ ನ ದಕ್ಷಿಣದಲ್ಲಿರುವ ದಹಿಯೆಹ್ ಜಿಲ್ಲೆಯಲ್ಲಿ ಹಿಜ್ಬುಲ್ಲಾ ಪ್ರಧಾನ ಕಚೇರಿಯ ಮೇಲೆ ರವಿವಾರ ದಾಳಿ ನಡೆಸಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ (IDF) ಹೇಳಿಕೆಯಲ್ಲಿ ತಿಳಿಸಿದೆ.

ಇಸ್ರೇಲಿ ನಾಗರಿಕರು ಮತ್ತು ದಕ್ಷಿಣ ಲೆಬನಾನ್‌ನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಐಡಿಎಫ್ ಪಡೆಗಳ ವಿರುದ್ಧ ‘ಭಯೋತ್ಪಾದಕ’ ದಾಳಿಗಳನ್ನು ಪ್ರೇರೇಪಿಸಲು ಹಿಜ್ಬುಲ್ಲಾ ಬಂಡುಕೋರರು ಈ ಪ್ರಧಾನ ಕಚೇರಿಯನ್ನು ಬಳಸುತ್ತಿದ್ದರು ಎಂದು ಇಸ್ರೇಲ್ ಮಿಲಿಟರಿ ಪ್ರತಿಪಾದಿಸಿದೆ.

ಇಸ್ರೇಲ್ ಭೂಪ್ರದೇಶದೊಳಗೆ ಹಿಜ್ಬುಲ್ಲಾ ಗುಂಡಿನ ದಾಳಿ ನಡೆಸಿದ ಬೆನ್ನಲ್ಲೇ ಈ ಪ್ರತಿದಾಳಿ ನಡೆದಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹಿಜ್ಬುಲ್ಲಾ ಗುಂಪು ಉತ್ತರ ಇಸ್ರೇಲ್‌ನತ್ತ ಮೂರು ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಇಸ್ರೇಲ್ ನಡೆಸಿದ ಈ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News