×
Ad

ಲೆಬನಾನ್: ವೈಮಾನಿಕ ದಾಳಿಯಲ್ಲಿ ಇಬ್ಬರು ಪತ್ರಕರ್ತರ ಮೃತ್ಯು

Update: 2023-11-21 23:38 IST

ಸಾಂದರ್ಭಿಕ ಚಿತ್ರ (ndtv.com)

ಬೈರೂತ್: ಮಂಗಳವಾರ ದಕ್ಷಿಣ ಲೆಬನಾನ್ನಲ್ಲಿ ಮಂಗಳವಾರ ನಡೆದ ವೈಮಾನಿಕ ದಾಳಿಯಲ್ಲಿ ಲೆಬನಾನ್ ಟಿವಿ ಚಾನೆಲ್ನ ಇಬ್ಬರು ಪತ್ರಕರ್ತರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇಸ್ರೇಲ್ ಜತೆಗಿನ ಗಡಿಭಾಗದ ತಿರ್ ಹರ್ಫಾ ನಗರದ ಬಳಿ ಇಸ್ರೇಲ್ ಸೇನೆ ನಡೆಸಿದ ದಾಳಿ ಇದಾಗಿದೆ ಎಂದು ಲೆಬನಾನ್ ಪ್ರಧಾನಿ ನಜೀಬ್ ಮಿಕಾತಿ ಆರೋಪಿಸಿದ್ದಾರೆ. ಫೆಲೆಸ್ತೀನ್ ಪರ ನಿಲುವು ಹೊಂದಿರುವ ಅಲ್ ಮಯಾದೀನ್ ಟಿವಿ ಸಿಬಂದಿಗಳನ್ನು ಗುರಿಯಾಗಿಸಿ ಇಸ್ರೇಲ್ ನಡೆಸಿದ ಉದ್ದೇಶಪೂರ್ವಕ ದಾಳಿಯಲ್ಲಿ ಇಬ್ಬರು ಪತ್ರಕರ್ತರು ಸಾವನ್ನಪ್ಪಿದ್ದು ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಇದು ಮಾಧ್ಯಮದ ಧ್ವನಿ ಹತ್ತಿಕ್ಕಲು ಇಸ್ರೇಲ್ ಮಾಡುವ ಪ್ರಯತ್ನದ ಮುಂದುವರಿದ ಭಾಗವಾಗಿದೆ ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News