×
Ad

ಅಮೆರಿಕದಲ್ಲಿ ಕುಷ್ಟರೋಗ ಪ್ರಕರಣ ಹೆಚ್ಚಳ

Update: 2023-08-02 23:17 IST
ವಾಷಿಂಗ್ಟನ್: ಅಮೆರಿಕದ ಫ್ಲೊರಿಡಾ ರಾಜ್ಯದಲ್ಲಿ ಕುಷ್ಟರೋಗ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಅಮೆರಿಕದ ರೋಗನಿಯಂತ್ರಣ ಮತ್ತು ತಡೆ ಕೇಂದ್ರ(ಸಿಡಿಸಿ)ದ ವರದಿ ಆತಂಕಕ್ಕೆ ಕಾರಣವಾಗಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಹೇಳಿದೆ.
2020ರಲ್ಲಿ ಅಮೆರಿಕದಲ್ಲಿ 159 ಹೊಸ ಕುಷ್ಟರೋಗ ಪ್ರಕರಣ ದಾಖಲಾಗಿದ್ದು ಇದರಲ್ಲಿ ಸುಮಾರು ಶೇ.20ದಷ್ಟು ಫ್ಲೋರಿಡಾದ ಮಧ್ಯವಲಯದಲ್ಲೇ ವರದಿಯಾಗಿದೆ. ಕಳೆದ ದಶಕದಲ್ಲಿ ದೇಶದ ಆಗ್ನೇಯ ಭಾಗದಲ್ಲಿ ಕುಷ್ಟರೋಗ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಸಿಡಿಸಿ ಹೇಳಿದೆ.
ಅಮೆರಿಕದಲ್ಲಿ ಕುಷ್ಟರೋಗವು   ಈ ಹಿಂದೆ ಸಾಂಕ್ರಾಮಿಕವಾಗಿದ್ದ ಪ್ರದೇಶದಿಂದ ವಲಸೆ ಬಂದಿದ್ದ ವ್ಯಕ್ತಿಗಳನ್ನು ಬಾಧಿಸಿದ್ದರೆ, 2015-20ರ ಅವಧಿಯಲ್ಲಿ ಸುಮಾರು ಶೇ.34ದಷ್ಟು ಹೊಸ ಪ್ರಕರಣಗಳ ರೋಗಿಗಳಿಗೆ ಸ್ಥಳೀಯವಾಗಿ ಈ ರೋಗ ಬಾಧಿಸಿದೆ. ಈ ಪ್ರದೇಶಗಳಿಗೆ ಪ್ರಯಾಣಿಸುವವರು ಈ ಅಂಶವನ್ನು ಪರಿಗಣಿಸಬೇಕು ಎಂದು ಸಿಡಿಸಿ ಎಚ್ಚರಿಸಿದೆ.
Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News