×
Ad

ಬ್ರೆಝಿಲ್ ಟ್ರಂಪ್ ಆದೇಶ ಪಾಲಿಸಬೇಕಿಲ್ಲ: ಬ್ರೆಝಿಲ್ ಅಧ್ಯಕ್ಷ ಲೂಯಿಸ್ ಡʼಸಿಲ್ವ

Update: 2025-07-10 21:33 IST

ಬ್ರೆಝಿಲ್ ಅಧ್ಯಕ್ಷ ಲೂಯಿಸ್ ಇನಾಶಿಯೊ ಲುಲ ಡ'ಸಿಲ್ವ | PC : NDTV 

ಬ್ರಸೀಲಿಯಾ: ಬ್ರೆಝಿಲ್ ಸ್ವತಂತ್ರ ಸಂಸ್ಥೆಗಳನ್ನು ಹೊಂದಿರುವ ಒಂದು ಸಾರ್ವಭೌಮ ರಾಷ್ಟ್ರವಾಗಿದೆ ಮತ್ತು ಯಾರಿಂದಲೂ ಆದೇಶಗಳನ್ನು ಒಪ್ಪುವುದಿಲ್ಲ ಎಂದು ಬ್ರೆಝಿಲ್ ಅಧ್ಯಕ್ಷ ಲೂಯಿಸ್ ಇನಾಶಿಯೊ ಲುಲ ಡ'ಸಿಲ್ವ ಗುರುವಾರ ಹೇಳಿದ್ದಾರೆ.

ಆಗಸ್ಟ್ 1ರಿಂದ ಬ್ರೆಝಿಲ್ ವಿರುದ್ಧ 50% ಸುಂಕ ಜಾರಿಗೆ ಬರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಿದ್ದರು. ಬ್ರೆಝಿಲ್‌ ನ ಮಾಜಿ ಅಧ್ಯಕ್ಷ ಜೈರ್ ಬೊಲ್ಸೊನಾರೋ ಅವರನ್ನು ಅಲ್ಲಿನ ಸರಕಾರ ನಡೆಸಿಕೊಳ್ಳುತ್ತಿರುವ ರೀತಿ, ಬೊಲ್ಸೊನಾರೋ ವಿರುದ್ಧ ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳನ್ನು ಖಂಡಿಸಿದ್ದ ಟ್ರಂಪ್ `ಬ್ರೆಝಿಲ್ ವಿರುದ್ಧ ಕಠಿಣ ಸುಂಕ ವಿಧಿಸಲು ಇದು ಪ್ರಮುಖ ಕಾರಣವಾಗಿದೆ ಎಂದಿದ್ದರು.

ಈ ಹೇಳಿಕೆಯನ್ನು ಖಂಡಿಸಿರುವ ಬ್ರೆಝಿಲ್ ಅಧ್ಯಕ್ಷ ಡ'ಸಿಲ್ವ `ಬೊಲೊನಾರೋ ವಿರುದ್ಧದ ಕಾನೂನು ಪ್ರಕ್ರಿಯೆಗಳು ಸಂಪೂರ್ಣವಾಗಿ ಆಂತರಿಕ ವಿಷಯವಾಗಿದೆ. ದಂಗೆಯನ್ನು ಯೋಜಿಸಲು ಜವಾಬ್ದಾರರಾಗಿರುವವರ ವಿರುದ್ಧದ ಕಾನೂನು ಪ್ರಕ್ರಿಯೆಗಳು ಬ್ರೆಝಿಲ್‌ ನ ನ್ಯಾಯಾಂಗದ ವ್ಯಾಪ್ತಿಯಡಿ ಬರುತ್ತವೆ. ಯಾವುದೇ ಬಾಹ್ಯ ಒತ್ತಡ ಅಥವಾ ಬೆದರಿಕೆಗಳು ದೇಶದ ನ್ಯಾಯಾಲಯದ ಕಾರ್ಯಕ್ಕೆ ಅಡ್ಡಿಯಾಗದು' ಎಂದಿದ್ದಾರೆ. ಅಲ್ಲದೆ ಅಮೆರಿಕ ವಿಧಿಸಿರುವ ತೀವ್ರ ಸುಂಕಕ್ಕೆ ಪ್ರತಿಯಾಗಿ ಬ್ರೆಝಿಲ್ ಕೂಡಾ ಪರಸ್ಪರ ಸಂಬಂಧ ಕಾನೂನಿಡಿ ಸೂಕ್ತ ಪ್ರತಿಕ್ರಮ ಕೈಗೊಳ್ಳುತ್ತದೆ ಎಂದು ಬ್ರೆಝಿಲ್ ಅಧ್ಯಕ್ಷರು ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News