×
Ad

ಮಾಲಿ | ಉಗ್ರರ ದಾಳಿಯಲ್ಲಿ 10 ಮಂದಿ ಮೃತ್ಯು

Update: 2025-02-08 22:08 IST

ಸಾಂದರ್ಭಿಕ ಚಿತ್ರ

ಡಕರ್: ಮಾಲಿ ದೇಶದ ಯೋಧರು ಹಾಗೂ ರಶ್ಯದ ಬಾಡಿಗೆ ಸಿಪಾಯಿಗಳ ತುಕಡಿ `ವ್ಯಾಗ್ನರ್'ನ ಸೈನಿಕರು ಬೆಂಗಾವಲು ಒದಗಿಸುತ್ತಿದ್ದ ವಾಹನಗಳ ಸಾಲನ್ನು ಗುರಿಯಾಗಿಸಿ ನಡೆದ ಶಂಕಿತ ಉಗ್ರರ ದಾಳಿಯಲ್ಲಿ 10 ಮಂದಿ ಸಾವನ್ನಪ್ಪಿರುವುದಾಗಿ ಭದ್ರತಾ ಅಧಿಕಾರಿಗಳು ಶನಿವಾರ ಹೇಳಿದ್ದಾರೆ.

ಉತ್ತರ ಪ್ರಾಂತದ ಗವೊ ಹಾಗೂ ಅಂಸೋಂಗೊ ನಗರದ ನಡುವಿನ ಹೆದ್ದಾರಿಯಲ್ಲಿ ದಾಳಿ ನಡೆದಿದೆ. ಈ ಹೆದ್ದಾರಿಯಲ್ಲಿ ಉಗ್ರರ ದಾಳಿ ಘಟನೆ ಹೆಚ್ಚಾಗಿರುವ ಕಾರಣ ಯೋಧರ ಬೆಂಗಾವಲಿನಲ್ಲಿ ವಾಹನಗಳು ಸಂಚರಿಸಲು ಅವಕಾಶ ನೀಡಲಾಗಿದೆ. ಶುಕ್ರವಾರ ಸಂಜೆ ನಾಗರಿಕರು ಪ್ರಯಾಣಿಸುತ್ತಿದ್ದ 22 ಮಿನಿಬಸ್‍ಗಳು, 6 ದೊಡ್ಡ ಬಸ್ಸುಗಳು ಹಾಗೂ 8 ಟ್ರಕ್‍ಗಳಿಗೆ 10 ಬೆಂಗಾವಲು ವಾಹನಗಳ ಭದ್ರತೆ ಒದಗಿಸಲಾಗಿತ್ತು. ವಾಹನಗಳ ಸಾಲನ್ನು ಅಡ್ಡಗಟ್ಟಿದ ಉಗ್ರರು ಮನಬಂದಂತೆ ಗುಂಡು ಹಾರಿಸಿದ್ದು ಮೃತರಲ್ಲಿ ಯೋಧರು ಹಾಗೂ ನಾಗರಿಕರು ಸೇರಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ. ಕನಿಷ್ಟ 5 ವಾಹನಗಳನ್ನು ಉಗ್ರರು ಧ್ವಂಸಗೊಳಿಸಿದ್ದಾರೆ. ಯಾವುದೇ ಗುಂಪು ದಾಳಿಯ ಹೊಣೆ ವಹಿಸಿಕೊಂಡಿಲ್ಲ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News