×
Ad

ಬ್ರಿಟನ್: `ಕಪಾಳ ಮೋಕ್ಷ ಚಿಕಿತ್ಸೆ' ಸಂದರ್ಭ ಮಹಿಳೆ ಮೃತ್ಯು!

Update: 2024-01-04 23:37 IST

ಲಂಡನ್: `ಕೆನ್ನೆಗೆ ಹೊಡೆಯುವ ಚಿಕಿತ್ಸಾ ಪ್ರಕ್ರಿಯೆ'ಯ ಸಂದರ್ಭ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣದಲ್ಲಿ ಕ್ಯಾಲಿಫೋರ್ನಿಯಾದ ಪರ್ಯಾಯ ವೈದ್ಯ ಹಾಂಗ್ಚಿ ಕ್ಸಿಯಾವೊ ವಿರುದ್ಧ ನರಹತ್ಯೆ ಪ್ರಕರಣ ದಾಖಲಿಸಲಾಗಿದ್ದು ವಿಚಾರಣೆ ಮುಂದುವರಿದಿದೆ ಎಂದು ವರದಿಯಾಗಿದೆ.

2016ರಲ್ಲಿ ಕ್ಸಿಯಾವೊ `ಕಪಾಳಮೋಕ್ಷ ಚಿಕಿತ್ಸಾ ಕಾರ್ಯಾಗಾರ'ವನ್ನು ಲಂಡನ್ ನ ಹೋಟೆಲ್ ನಲ್ಲಿ ಆಯೋಜಿಸಿದ್ದ. (ಈ ಚಿಕಿತ್ಸಾ ವಿಧಾನದಲ್ಲಿ ರೋಗಿ ತನ್ನ ಕೆನ್ನೆಗೆ ಹೊಡೆದುಕೊಳ್ಳುತ್ತಾನೆ ಅಥವಾ ವೈದ್ಯರು ರೋಗಿಯ ಕೆನ್ನೆಗೆ ಬಾರಿಸುತ್ತಾರೆ). ಇದರಲ್ಲಿ ಪಾಲ್ಗೊಂಡಿದ್ದ 71 ವರ್ಷದ ಡಯಾಬಿಟಿಸ್ ರೋಗಿ ಡೇನಿಯಲ್ ಕಾರ್ಗಾಮ್ ಎಂಬ ಮಹಿಳೆ ತೀವ್ರ ಅಸ್ವಸ್ಥಗೊಂಡು ಮೃತಪಟ್ಟಿದ್ದರು. ಡಯಾಬಿಟಿಸ್ ರೋಗಿಗೆ ಚಿಕಿತ್ಸೆ ಒದಗಿಸುವಾಗ ತೆಗೆದುಕೊಳ್ಳಬೇಕಾದ ಕಾಳಜಿಯ ಬಗ್ಗೆ ಕ್ಸಿಯಾವೊ ನಿರ್ಲಕ್ಷ್ಯ ವಹಿಸಿದ್ದ ಎಂದು ಆರೋಪಿಸಲಾಗಿತ್ತು. ಬಳಿಕ ಆಸ್ಟ್ರೇಲಿಯಾದಲ್ಲಿ ತಲೆಮರೆಸಿಕೊಂಡಿದ್ದ ಚೀನಾ ಮೂಲದ ಕ್ಸಿಯಾವೊನನ್ನು ಬ್ರಿಟನ್ ಗೆ ಗಡೀಪಾರು ಮಾಡಿ ಪ್ರಕರಣ ದಾಖಲಿಸಲಾಗಿದ್ದು ವಿಚಾರಣೆ ಪ್ರಾರಂಭವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News