×
Ad

ಹಾಲಿವುಡ್ ನಟರಿಗೆ ಅಂಚೆಯ ಮೂಲಕ ಮಲ, ಮೂತ್ರ ಕಳಿಸಿದ್ದ ವ್ಯಕ್ತಿಗೆ ಜೈಲು

Update: 2023-08-16 23:58 IST

ಸಾಂದರ್ಭಿಕ ಚಿತ್ರ | Photo: PTI

ಸಿಡ್ನಿ: ಹಾಲಿವುಡ್ ನಟರಾದ ಲಿಯೊನಾರ್ಡೊ ಡಿ ಕ್ಯಾಪ್ರಿಯೊ ಮತ್ತು ಜ್ಯಾರೆದ್ ಲೆಟೋಗೆ ತನ್ನ ಮಲ, ಮೂತ್ರವನ್ನು ಅಂಚೆಯ ಮೂಲಕ ಕಳುಹಿಸಿದ್ದ ಆಸ್ಟ್ರೇಲಿಯಾದ ವ್ಯಕ್ತಿಗೆ 2 ವರ್ಷದ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ‘ಎಬಿಸಿ' ಸುದ್ಧಿವಾಹಿನಿ ಬುಧವಾರ ವರದಿ ಮಾಡಿದೆ.

ಕಳೆದ ಫೆಬ್ರವರಿಯಲ್ಲಿ ಪಶ್ಚಿಮ ಆಫ್ರಿಕಾ ನಿವಾಸಿ, ವೆರೊನಿಕ ಗ್ರೆ ಎಂಬ ವ್ಯಕ್ತಿ 23 ಪೋಸ್ಟ್ ಕವರ್ಗಳಲ್ಲಿ ತನ್ನ ಮಲ ಮತ್ತು ಮೂತ್ರಗಳನ್ನು ಪ್ಯಾಕ್ ಮಾಡಿ ಅವನ್ನು ಲಿಯೊನಾರ್ಡೊ ಮತ್ತು ಲೆಟೊಗೆ `ವ್ಯಾಲೆಂಟೈನ್ ದಿನದ ಉಡುಗೊರೆ' ಎಂದು ಬರೆದು ಪಾರ್ಸೆಲ್ ಮಾಡಿದ್ದ. ಇದರಲ್ಲಿ ಕೆಲವು ಪಾರ್ಸೆಲ್ಗಳು ಒಡೆದು ಅಂಚೆ ಸಿಬ್ಬಂದಿಗಳ ಮೇಲೆ ಸೋರಿತ್ತು. ಅಂಚೆ ಕಚೇರಿಯವರು ನೀಡಿದ ದೂರಿನಂತೆ ಸ್ಥಳೀಯ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ‘ಗ್ರೆ ಬೆದರಿಕೆ ಅಥವಾ ಕಿರುಕುಳ ನೀಡಲು ಅಂಚೆ ಸೇವೆಯನ್ನು ಬಳಸಿಕೊಂಡ ಅಪರಾಧ ಸಾಬೀತಾಗಿದೆ' ಎಂದು ತೀರ್ಪು ನೀಡಿ 2 ವರ್ಷದ ಜೈಲುಶಿಕ್ಷೆ ವಿಧಿಸಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News