×
Ad

ರೈಲುಗಳ ಮುಖಾಮುಖಿ ಡಿಕ್ಕಿ ಹಲವರಿಗೆ ಗಾಯ

Update: 2023-09-30 23:30 IST

                                                 ಸಾಂದರ್ಭಿಕ ಚಿತ್ರ| Photo: NDTV

ಎಡಿನ್ಬರ್ಗ್ : ಸ್ಕಾಟ್ಲ್ಯಾಂಡ್ ನ ಹೈಲ್ಯಾಂಡ್ ಪ್ರದೇಶದ ಎವಿಮೋರ್ ರೈಲು ನಿಲ್ದಾಣದಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿಯಾಗಿ ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ.

ಲಂಡನ್ ನಿಂದ 965 ಕಿ.ಮೀ ಉತ್ತರದಲ್ಲಿರುವ ಎವಿಮೋರ್ ರೈಲುನಿಲ್ದಾಣದಲ್ಲಿ ಶುಕ್ರವಾರ ಸಂಜೆ ಸುಮಾರು 7 ಗಂಟೆಗೆ ಅಪಘಾತ ಸಂಭವಿಸಿದೆ. ಗಂಟೆಗೆ ನೂರು ಮೈಲು ವೇಗದಲ್ಲಿ ಚಲಿಸಿದ ಮೊದಲ ಉಗಿಬಂಡಿ ಎಂಬ ದಾಖಲೆ ಬರೆದಿರುವ, ಶತಮಾನಕ್ಕೂ ಹಳೆಯದಾದ ‘ಫ್ಲೈಯಿಂಗ್ ಸ್ಕಾಟ್ಸ್ಮ್ಯಾನ್’ ರೈಲಿಗೆ ಮತ್ತೊಂದು ರೈಲು ಡಿಕ್ಕಿಯಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣಪುಟ್ಟ ಗಾಯಗೊಂಡಿರುವ ಇತರರಿಗೆ ಪ್ರಾಥಮಿಕ ಚಿಕಿತ್ಸೆ ಒದಗಿಸಲಾಗಿದೆ ಎಂದು ಸ್ಕಾಟ್ಲ್ಯಾಂಡ್ ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News