ಫಿಲಿಪೈನ್ಸ್‌ನಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ; ಸುನಾಮಿ ಎಚ್ಚರಿಕೆ
Update: 2025-10-10 11:22 IST
Screengrab:X/@geotechwar
ಮನಿಲಾ, ಅ.10: ದಕ್ಷಿಣ ಫಿಲಿಪೈನ್ಸ್‌ನಲ್ಲಿ ಶುಕ್ರವಾರ ಸಂಭವಿಸಿದ ಎರಡು ಬಲಿಷ್ಠ ಭೂಕಂಪದಲ್ಲಿ ಕನಿಷ್ಠ 7 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಶುಕ್ರವಾರ ಬೆಳಿಗ್ಗೆ ಸುಮಾರು 10 ಗಂಟೆಗೆ(ಅಂತಾರಾಷ್ಟ್ರೀಯ ಕಾಲಮಾನ) ಮಿಂದಾನವೊ ಪ್ರಾಂತದ ಮನಾಯ್ ನಗರದ ಬಳಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು 10 ಗಂಟೆಗಳ ಬಳಿಕ ಇದೇ ಪ್ರದೇಶದಲ್ಲಿ 6.7 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ.
ಮನಾಯ್ ನಗರದ ಪಶ್ಚಿಮದಲ್ಲಿ ಚಿನ್ನದ ಗಣಿ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದು ಇತರ ಹಲವರು ಗಾಯಗೊಂಡಿದ್ದಾರೆ. ಮಾತಿ ನಗರದ ಬಳಿ ಮನೆಯ ಗೋಡೆ ಕುಸಿದು ಒಬ್ಬ ಮೃತಪಟ್ಟರೆ ಮನೆಯಲ್ಲಿದ್ದ ಮತ್ತೊಬ್ಬ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ದವಾವೊ ನಗರದಲ್ಲಿ ಕಟ್ಟಡ ಕುಸಿದು ಬಿದ್ದು ಇಬ್ಬರು ಮೃತರಾಗಿದ್ದಾರೆ. ಹಲವು ಕಟ್ಟಡಗಳು, ಮನೆಗಳು ಹಾಗೂ ಸೇತುವೆಗಳಿಗೆ ವ್ಯಾಪಕ ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.