×
Ad

ಇಸ್ರೇಲ್‌: ಪ್ರಧಾನಿ ನೆತನ್ಯಾಹು ವಿರುದ್ಧ ಬೃಹತ್ ಪ್ರತಿಭಟನೆ

Update: 2024-07-01 08:16 IST

ಟೆಲ್ ಅವೀವ್: ಗಾಝಾದಲ್ಲಿ ಯುದ್ಧ ಸಾರಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಸಾವಿರಾರು ಮಂದಿ ಇಸ್ರೇಲಿಗಳು ಟೆಲ್ ಅವೀವ್ ನಲ್ಲಿ ಭಾನುವಾರ ಬೃಹತ್ ಪ್ರತಿಭಟನೆ ನಡೆಸಿದರು.

ಹಮಾಸ್ ವಿರುದ್ಧದ ದಾಳಿಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಪ್ರತಿಭಟನಾಕಾರರು ಇಸ್ರೇಲಿ ಸರ್ಕಾರವನ್ನು ಒತ್ತಾಯಿಸಿದರು.

2023ರ ಅಕ್ಟೋಬರ್ ನಲ್ಲಿ ಇಸ್ರೇಲ್- ಹಮಾಸ್ ನಡುವೆ ಯುದ್ಧ ಆರಂಭವಾದ ಬಳಿಕ ಪ್ಯಾಲೆಸ್ತೀನ್ ನಲ್ಲಿ ಈ ಯುದ್ಧಕ್ಕೆ ಹಲವು ಜೀವಗಳು ಬಲಿಯಾಗಿವೆ. ಆರು ತಿಂಗಳ ಹಿಂದೆ ಹಮಾಸ್ ವಶಕ್ಕೆ ಪಡೆದಿದ್ದ ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆ ಮಾಡುವಂತೆಯೂ ಪ್ರತಿಭಟನಾಕಾರರು ಆಗ್ರಹಿಸಿದರು.

ಇದರ ಜತೆಗೆ ಗಾಝಾದ ಪ್ರಸ್ತುತ ಪರಿಸ್ಥಿತಿಗೆ ಕಾರಣರಾದ ಇಸ್ರೇಲ್ ಪ್ರಧಾನಿ ನೆತನ್ಯಾಹು ರಾಜೀನಾಮೆಗೂ ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News