ಗಾಝಾ ಒತ್ತೆಯಾಳುಗಳ ವಾಪಸಾತಿಗೆ ಆಗ್ರಹಿಸಿ ಇಸ್ರೇಲ್‍ನಲ್ಲಿ ಬೃಹತ್ ರ‍್ಯಾಲಿ
Photo Credit : X \ @StephenGreek
ಟೆಲ್ ಅವೀವ್, ಅ.5: ಗಾಝಾ ಒತ್ತೆಯಾಳುಗಳು ಸ್ವದೇಶಕ್ಕೆ ಹಿಂತಿರುಗಲು ಈಗ ಲಭಿಸಿರುವ ಕೊನೆಯ ಅವಕಾಶವನ್ನು ಬೆಂಜಮಿನ್ ನೆತನ್ಯಾಹು ಸರಕಾರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿ ಇಸ್ರೇಲ್‍ನ ಟೆಲ್‍ಅವೀವ್‍ನಲ್ಲಿ ರವಿವಾರ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆದಿದೆ.
ಟೆಲ್‍ಅವೀವ್ ಮ್ಯೂಸಿಯಂ ಆಫ್ ಆರ್ಟ್‍ನ ಎದುರುಗಡೆ ಇರುವ `ಹೋಸ್ಟೇಜಸ್ ಸ್ಕ್ವಾರ್'ನಲ್ಲಿ ಒಟ್ಟು ಸೇರಿದ ಸಾವಿರಾರು ಜನರು `ಈಗ ಆಗದಿದ್ದರೆ ಎಂದಿಗೂ ಆಗದು' ಎಂಬ ಬ್ಯಾನರ್ ಪ್ರದರ್ಶಿಸಿದರು ಹಾಗೂ ಮತ್ತೊಂದು ಒಪ್ಪಂದ ವಿಫಲಗೊಳ್ಳಲು ಬಿಡಲಾಗದು ಎಂದು ಘೋಷಣೆ ಕೂಗಿದರು. ಟ್ರಂಪ್ ಮುಂದಿರಿಸಿದ ಗಾಝಾ ಶಾಂತಿ ಯೋಜನೆ ಯಶಸ್ವಿಯಾಗುವುದನ್ನು ಇಸ್ರೇಲ್ ಖಾತರಿ ಪಡಿಸಬೇಕೆಂದು ಒತ್ತೆಯಾಳುಗಳ ಕುಟುಂಬದ ಸದಸ್ಯರು ಆಗ್ರಹಿಸಿರುವುದಾಗಿ ವರದಿಯಾಗಿದೆ.
ಗಾಝಾದಲ್ಲಿ ಉಳಿದಿರುವ 48 ಒತ್ತೆಯಾಳುಗಳಲ್ಲಿ 30 ಮಂದಿ ಮೃತಪಟ್ಟಿರುವುದಾಗಿ ಇಸ್ರೇಲ್ ಹೇಳುತ್ತಿದೆ. ಶೀಘ್ರವೇ ಒತ್ತೆಯಾಳುಗಳು ಸ್ವದೇಶಕ್ಕೆ ಹಿಂತಿರುಗಲಿದ್ದಾರೆ ಎಂದು ನೆತನ್ಯಾಹು ಹೇಳಿದ್ದಾರೆ.