×
Ad

ಯೆಮನ್ ಬಳಿ ವಲಸಿಗರ ದೋಣಿ ಮುಳುಗಿ ಕನಿಷ್ಠ 49 ಮಂದಿ ಜಲಸಮಾಧಿ

Update: 2024-06-11 23:19 IST

ಸಾಂದರ್ಭಿಕ ಚಿತ್ರ

ಸನಾ : ಯೆಮನ್ ಕಡಲತೀರದ ಬಳಿ ವಲಸಿಗರಿದ್ದ ದೋಣಿ ಮುಳುಗಿ 31 ಮಹಿಳೆಯರು, 6 ಮಕ್ಕಳ ಸಹಿತ ಕನಿಷ್ಠ 49 ಮಂದಿ ಮೃತಪಟ್ಟಿದ್ದು ಇತರ 140 ಮಂದಿ ನಾಪತ್ತೆಯಾಗಿರುವುದಾಗಿ ವಿಶ್ವಸಂಸ್ಥೆಯ ಏಜೆನ್ಸಿ ಮಂಗಳವಾರ ಹೇಳಿದೆ.

ಸೊಮಾಲಿಯಾದ ಉತ್ತರ ಕರಾವಳಿಯಿಂದ ಹೊರಟಿದ್ದ ದೋಣಿಯಲ್ಲಿ ಸೊಮಾಲಿಯಾ ಮತ್ತು ಇಥಿಯೋಪಿಯಾದ 260 ವಲಸಿಗರಿದ್ದರು. ಏಡನ್ ಕೊಲ್ಲಿಯ ಬಳಿ ದೋಣಿ ಮುಳುಗಿದ್ದು 71 ಮಂದಿಯನ್ನು ರಕ್ಷಿಸಲಾಗಿದ್ದು ನಾಪತ್ತೆಯಾದವರ ಶೋಧ ಮತ್ತು ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News