×
Ad

ಅ.19ರಂದು ಗಾಝಾದ ಮೇಲೆ 153 ಟನ್ ಬಾಂಬ್ ಹಾಕಿದ್ದೇವೆ : ಇಸ್ರೇಲ್ ಪ್ರಧಾನಿ ನೆತನ್ಯಾಹು

Update: 2025-10-21 20:34 IST

ಬೆಂಜಮಿನ್ ನೆತನ್ಯಾಹು | Photo Credit : PTI  

ಟೆಲ್ ಅವೀವ್, ಅ.21: ಹಮಾಸ್ ಕದನ ವಿರಾಮ ಉಲ್ಲಂಘಿಸಿದ್ದಕ್ಕೆ ಪ್ರತಿಯಾಗಿ ಅಕ್ಟೋಬರ್ 19ರಂದು ಗಾಝಾದಲ್ಲಿನ ಗುರಿಗಳ ಮೇಲೆ ಇಸ್ರೇಲ್ ಪಡೆಗಳು 153 ಟನ್‍ಗಳಷ್ಟು ಬಾಂಬ್‍ಗಳನ್ನು ಬೀಳಿಸಿವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇಸ್ರೇಲ್‍ನ ಸಂಸತ್ತಿಗೆ ತಿಳಿಸಿದ್ದಾರೆ.

ನಮ್ಮ ಒಂದು ಕೈ ಆಯುಧ ಹಿಡಿದುಕೊಂಡಿದ್ದರೆ ಮತ್ತೊಂದು ಕೈ ಶಾಂತಿಗಾಗಿ ಚಾಚಿಕೊಂಡಿದೆ. ಶಾಂತಿಯನ್ನು ಬಲಿಷ್ಠರೊಂದಿಗೆ ಮಾಡಿಕೊಳ್ಳಬಹುದು, ದುರ್ಬಲರೊಂದಿಗೆ ಅಲ್ಲ. ಈಗ ಇಸ್ರೇಲ್ ಈ ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ ಎಂದು ನೆತನ್ಯಾಹು ಹೇಳಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News