×
Ad

ಇಸ್ರೇಲ್ ಮೇಲೆ ಇರಾನ್ ನಿಂದ ಮತ್ತೆ ಕ್ಷಿಪಣಿ ದಾಳಿ: ಇಸ್ರೇಲ್ ಸೇನೆ ಹೇಳಿಕೆ

Update: 2025-06-14 00:32 IST

Photo: x

ಜೆರುಸೆಲೆಂ: ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ರಕ್ಷಣಾ ವ್ಯವಸ್ಥೆಗಳು ದಾಳಿಯನ್ನು ತಡೆದಿವೆ ಎಂದು ಇಸ್ರೇಲ್ ಸೇನೆ ಹೇಳಿದೆ ಎಂದು BBC ವರದಿ ಮಾಡಿದೆ.

ಇರಾನ್ ಕ್ಷಿಪಣಿ ದಾಳಿ ನಡೆಯುತ್ತಿದ್ದಂತೆ ಮುಂಜಾಗ್ರತಾ ಕ್ರಮವಾಗಿ ಸೈರನ್ ಗಳು ಮೊಳಗಿದ್ದು, ಮುಂದಿನ ಸೂಚನೆ ಬರುವವರೆಗೂ ಸಾರ್ವಜನಿಕರಿಗೆ ಶೆಲ್ಟರ್ ಗಳಲ್ಲಿ ರಕ್ಷಣೆ ಪಡೆಯುವಂತೆ ಸೂಚಿಸಲಾಗಿದೆ ಎಂದು ಇಸ್ರೇಲ್ ಸೇನೆಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

“ನಾವು ಜೆರುಸಲೆಮ್‌ನಲ್ಲಿರುವ ನಮ್ಮ ಹೋಟೆಲ್‌ನಿಂದ ಬಿಬಿಸಿ ನ್ಯೂಸ್‌ಗಾಗಿ ನೇರ ವರದಿ ಮಾಡುತ್ತಿದ್ದಾಗ ನಮ್ಮ ತಲೆಯ ಮೇಲೆ ಎರಡು ಡ್ರೋನ್‌ಗಳು ಹಾರುತ್ತಿರುವುದನ್ನು ನಾವು ಗಮನಿಸಿದ್ದೇವೆ. ನಮಗೆ ಸ್ಫೋಟದ ಶಬ್ದ ಕೇಳಿಸಿತು. ಈ ಶಬ್ದವು ವೈಮಾನಿಕ ದಾಳಿಯೇ ಅಥವಾ ರಕ್ಷಣಾ ವ್ಯವಸ್ಥೆ ತಡೆದಿರುವ ಸೂಚಕವೇ ಎಂಬುದು ಸ್ಪಷ್ಟವಾಗಿಲ್ಲ” ಎಂದು ಬಿಬಿಸಿ ವಕ್ತಾರರು ಹೇಳಿದ್ದಾರೆ.

ಇಸ್ರೇಲ್‌ ನ ಟೆಲ್ ಅವೀವ್ ಮೇಲೆ, ನಗರದ ಗಗನಚುಂಬಿ ಕಟ್ಟಡಗಳ ಸುತ್ತಲೂ ದೊಡ್ಡ ಹೊಗೆಗಳು ಆವರಿಸಿವೆ. ಸ್ಫೋಟಗಳಂತಹ ಶಬ್ದಗಳೂ ಕೇಳಿ ಬರುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ವೀಡಿಯೊಗಳು ಆಕಾಶದಲ್ಲಿ ಕ್ಷಿಪಣಿಗಳನ್ನು ಹಾದು ಹೋಗುವುದನ್ನು ತೋರಿಸಿವೆ.

ಇರಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ ನಂತರ ಇರಾನ್ ಭಾರೀ ಹೊಡೆತ ನೀಡಲಿದೆ ಎಂದು ಇರಾನ್‌ ನ ಸರ್ವೋಚ್ಚ ನಾಯಕ ಆಯತುಲ್ಲಾ ಆಲಿ ಖಾಮಿನೈ ಹೇಳಿದ್ದರು. ಈ ಮಧ್ಯೆ ದಾಳಿ ಇಸ್ರೇಲ್‌ ಮೇಲೆ ದಾಳಿ ನಡೆಯುತ್ತಿದ್ದಂತೆ ನಾವು ಆಗಮಿಸಿದ್ದೇವೆ ಎಂದು ಇರಾನ್‌ ಸೇನೆ ಸಾಮಾಜಿಕ ಜಾಲ ತಾಣ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿದೆ.

ದಾಳಿಯ ಬೆನ್ನಿಗೇ ಇರಾನ್‌ ನ ಸರ್ವೋಚ್ಚ ನಾಯಕ ಆಯತುಲ್ಲಾ ಆಲಿ ಖಾಮಿನೈ ಯಹೂದಿಗಳಿಗೆ ಜೀವನವು ತುಂಬಾ ಕಹಿಯಾಗಿರಲಿದೆ ಎಂದು ಪೋಸ್ಟ್‌ ಮಾಡಿರುವುದು ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗುವ ಸೂಚನೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News